ಕೊರಂಗ್ರಪಾಡಿ: ವಾರದ ಸಂತೆಗೆ ಚಾಲನೆ

ಉಡುಪಿ: ಗುಣಮಟ್ಟದ ವಸ್ತುಗಳನ್ನು ನ್ಯಾಯೋಚಿತ ಬೆಲೆಗೆ ಸಂತೆಗೆ ಬರುವ ಗ್ರಾಹಕರಿಗೆ ನೀಡಿ ವಿಶ್ವಾಸಗಳಿಸಿ ಎಂದು ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಅಂಚನ್ ವ್ಯಾಪಾರಿಗಳಿಗೆ ಸಲಹೆ ನೀಡಿದರು. ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಂಗ್ರಪಾಡಿ ವಿಜಯ ಬ್ಯಾಂಕ್ ಬಳಿ ಪ್ರತಿ ಮಂಗಳವಾರ ನಡೆಯಲಿರುವ ವಾರದ ಸಂತೆಯನ್ನು ಇಂದು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಅಭಿವೃದ್ಧಿ ಹೊಂದುತ್ತಿರುವ ಕೊರಂಗ್ರಪಾಡಿ ಗ್ರಾಮದಲ್ಲಿ ಗ್ರಾಪಂ ನೂತನ ಆಡಳಿತ ಇನ್ನಷ್ಟು ಮಾದರಿ, ಜನಪರ […]