ಕೂಡ್ಲು ಫಾಲ್ಸ್: ದುಬಾರಿ ಪ್ರವೇಶ ಶುಲ್ಕ ಆದೇಶ ಕೈಬಿಟ್ಟ ಇಲಾಖೆ

ಹೆಬ್ರಿ: ಸ್ಥಳೀಯರು ಹಾಗೂ ಪ್ರವಾಸಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ ಕೂಡ್ಲು ಫಾಲ್ಸ್‌ನ ದುಬಾರಿ ಪ್ರವೇಶ ಶುಲ್ಕವನ್ನು ಅರಣ್ಯ ಇಲಾಖೆ ಕೈಬಿಟ್ಟಿದೆ. ಹೆಬ್ರಿ ಸೋಮೇಶ್ವರ ವನ್ಯಜೀವಿ ವಲಯ ವ್ಯಾಪ್ತಿಯ ಅಭಯಾರಣ್ಯದಲ್ಲಿ ಇರುವ ಕೂಡ್ಲು ಫಾಲ್ಸ್‌ನ ಪ್ರವೇಶ ಶುಲ್ಕವನ್ನು ಕೊರೊನಾ ಲಾಕ್ ಡೌನ್ ಬಳಿಕ ₹ 50 ಬದಲು ಮೂರು ಪಟ್ಟು ಅಂದರೆ ₹ 200 ಹೆಚ್ಚಿಸಿ ಆದೇಶ ಹೊರಡಿಸಲಾಗಿತ್ತು. ನವೆಂಬರ್ ಮೊದಲ ವಾರದಿಂದ ಭಾರತೀಯರು ಒಬ್ಬರಿಗೆ ₹ 200, ಮಕ್ಕಳಿಗೆ ಒಬ್ಬರಿಗೆ ₹ 175, ವಿದೇಶಿಗರಿಗೆ ಒಬ್ಬರಿಗೆ […]