ಕೊಲ್ಲೂರು ವಿದ್ಯುತ್ ಉಪಕೇಂದ್ರ ವ್ಯಾಪ್ತಿಯಲ್ಲಿ ನಿರ್ಬಂಧಿತ ಚಟುವಟಿಕೆ ಕೈಗೊಳ್ಳದಿರುವಂತೆ ಮೆಸ್ಕಾಂ ಸೂಚನೆ
ಕೊಲ್ಲೂರು: ಕುಂದಾಪುರ ವಿಭಾಗದ ಬೈಂದೂರು ಉಪವಿಭಾಗದ ಗೋಳಿಹೊಳೆ ಗ್ರಾಮದ ಹಾಲ್ಕಲ್ ಎಂಬಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಕೊಲ್ಲೂರು ವಿದ್ಯುತ್ ಉಪಕೇಂದ್ರಕ್ಕೆ, ವಿದ್ಯುತ್ ಪೂರೈಕೆ ಸಲುವಾಗಿ ನಾವುಂದ ವಿದ್ಯುತ್ ಉಪಕೇಂದ್ರದಿಂದ ನಿರ್ಮಾಣಗೊಂಡಿರುವ 20.84 ಕಿ.ಮೀ ಉದ್ದದ 33 ಕೆವಿ ವಿದ್ಯುತ್ ಮಾರ್ಗವು ಸೆಪ್ಟಂಬರ್ 29 ರ ನಂತರ ಯಾವುದೇ ದಿನದಲ್ಲಿ ಚೇತನಗೊಳ್ಳಲಿರುವುದು. ಆದುದರಿಂದ ಕೊಲ್ಲೂರು ಹೊಸ ವಿದ್ಯುತ್ ಉಪಕೇಂದ್ರಕ್ಕೆ ವಿದ್ಯುತ್ ಸರಬರಾಜಾಗುವ ಮಾರ್ಗವು ಹಾದುಹೋಗುವ ಹೇರೂರು, ನಾವುಂದ, ಉಳ್ಳೂರು-11, ಉಪ್ರಳ್ಳಿ, ಕಂಬದಕೋಣೆ, ಶೇಡಿಗುಡ್ಡೆ, ಹೇರಂಜಾಲು, ಕಾಲ್ತೋಡು, ಬಲಗೋಣ, ಅರೆಶಿರೂರು, ಎಲ್ಲೂರು, […]