ಇತಿಹಾಸ ಪ್ರಸಿದ್ದ ಸೂರಾಲು ಅರಮನೆಯಲ್ಲಿ ಕುಡುಬಿ ಜನಾಂಗದ ವೈಷಿಷ್ಟ್ಯಪೂರ್ಣ ಹೋಳಿ ಸಂಭ್ರಮ

ಉಡುಪಿ: ಇಲ್ಲಿನ ಕೊಕ್ಕರ್ಣೆಯ ಇತಿಹಾಸ ಪ್ರಸಿದ್ದ ಸೂರಾಲು ಅರಮನೆಯಲ್ಲಿ ಪ್ರತಿವರ್ಷದಂತೆಯೆ ಕುಡುಬಿ ಜನಾಂಗದ ಕುಮಟೆ ನೃತ್ಯವು ಸಂಭ್ರಮ ಸಡಗರದಿಂದ ಜರಗಿತು. ನೂರಾರು ಕುಡುಬಿ ಕಲಾವಿದರು ಪಾರಂಪರಿಕ ವೇಷಭೂಷಣಗಳನ್ನು ತೊಟ್ಟು ಸೂರಾಲು ಅರಮನೆಯ ಅಂಗಳದಲ್ಲಿ ತಮ್ಮ ಕಲಾಕೌಶಲ್ಯವನ್ನು ಪ್ರದರ್ಶಿಸಿದರು. ಪೋರ್ಚುಗೀಸರ ಉಪಟಳ ತಾಳಲಾರದೆ ಗೋವಾದಿಂದ ಪಲಾಯನಗೈದ ಕುಡುಬಿ ಜನಾಂಗದವರಿಗೆ ಅರಮನೆಯ ಹಿಂದಿನ ರಾಜರು ಈ ಆಶ್ರಯ ನೀಡಿ ಉದ್ಯೋಗ ನೀಡಿದ ಕುರುಹಿನ ನೆನಪಿಗಾಗಿ ಇಂದಿಗೂ ಅರಮನೆಯ ಒಳಿತಿಗಾಗಿ ನೃತ್ಯ ಪ್ರದರ್ಶನವನ್ನು ಮಾಡುತ್ತಾ ಬಂದಿರುತ್ತಾರೆ. ಜಾನಪದ ಕಲೆ ಮತ್ತು ಜನಪದರನ್ನು […]