ಕೊಡವೂರು: ರಸ್ತೆ ಕಾಮಗಾರಿ ಕುರಿತು ಸಾರ್ವಜನಿಕ ಸಭೆ
ಉಡುಪಿ: ಕುಡಿಯುವ ನೀರು, ವಿದ್ಯುತ್ ಮತ್ತು ರಸ್ತೆ ಸಂಪರ್ಕ ಮೂಲಭೂತ ಅವಶ್ಯಕತೆಗಳಾಗಿದ್ದು, ಸಾರ್ವಜನಿಕರ ಹಾಗೂ ಗ್ರಾಮದ ಸಮಸ್ಯೆಗಳನ್ನು ತಿಳಿಯುವ ನಿಟ್ಟಿನಲ್ಲಿ ನಗರಸಭಾ ಸದಸ್ಯ ವಿಜಯ್ ಕೊಡವೂರು ಸಭೆ ನಡೆಸಿದರು. ಹೊಸ ರಸ್ತೆ ನಿರ್ಮಾಣಕ್ಕಾಗಿ ಆ ಭಾಗದ ಎಲ್ಲಾ ನಾಗರಿಕರನ್ನು ಒಟ್ಟು ಸೇರಿಸಿ ಅಲ್ಲಿಯ ಅವಶ್ಯಕತೆಗಳನ್ನು ಪೂರೈಸುವುದು ನನ್ನಂತಹ ಜನಪ್ರತಿನಿಧಿ ಜವಾಬ್ದಾರಿ ಎಂದ ಅವರು, ಹೊಸ ರಸ್ತೆ ಕಾಮಗಾರಿಯ ಸಂದರ್ಭದಲ್ಲಿ ಬರುವಂತಹ ಅಡೆ-ತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಭೆ ನಡೆಸುತ್ತಿದ್ದೇನೆ ಎಂದರು. ಸರಕಾರದಿಂದ ಬರುವಂತಹ ಅನುದಾನಗಳನ್ನು ಸಮರ್ಪಕವಾಗಿ ಬಳಸುವ ನಿಟ್ಟಿನಲ್ಲಿ […]
ಕೊಡವೂರು: ಲಕ್ಷ್ಮೀ ನಗರ ರಿಕ್ಷಾ ನಿಲ್ದಾಣದಲ್ಲಿ ಸೋಲಾರ್ ದೀಪ ಅಳವಡಿಕೆ
ಕೊಡವೂರು: ವಾರ್ಡಿನ ಲಕ್ಷ್ಮೀ ನಗರ ರಿಕ್ಷಾ ನಿಲ್ದಾಣಕ್ಕೆ ಸೋಲಾರ್ ದೀಪ ಅಳವಡಿಕೆಯ ಉದ್ಘಾಟನಾ ಕಾರ್ಯಕ್ರಮವು ಡಿ. 15, ಗುರುವಾರದಂದು ಲಕ್ಷ್ಮೀನಗರ ರಿಕ್ಷಾ ನಿಲ್ದಾಣದಲ್ಲಿ ನಡೆಯಿತು. ಕೆಲವು ತಿಂಗಳ ಹಿಂದೆ ಜನರ ಕುಂದು ಕೊರತೆಗಳನ್ನು ವಿಚಾರಿಸುವ ಸಂದರ್ಭದಲ್ಲಿ ಕೊಡವೂರಿನ ಲಕ್ಷ್ಮೀನಗರ ಆಟೋ ನಿಲ್ದಾಣದಲ್ಲಿ ಗ್ರಾಮ ಸಭೆಯನ್ನು ನಡೆಸಿದಾಗ ಸೋಲಾರ್ ದೀಪದ ಅವಶ್ಯಕತೆಯನ್ನು ಅಲ್ಲಿನ ರಿಕ್ಷಾ ಚಾಲಕರು ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ನಿಲ್ದಾಣಕ್ಕೆ ದಾನಿಗಳ ನೆರವಿನಿಂದ ಸೋಲಾರ್ ದೀಪವನ್ನು ಅಳವಡಿಸಲಾಯಿತು. ದಾನಿಗಳಾದ ಕರಾವಳಿ […]