ಕೊಡವೂರು: ಕುಡಿಯುವ ನೀರಿನ ಘಟಕ ಉದ್ಘಾಟನೆ
ಕೊಡವೂರು: ಇಲ್ಲಿನ (ಸರ್ಕಲ್) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮತ್ತು ನಾಗರಿಕರಿಗೆ ಕುಡಿಯಲು ನೀರಿನ ಅವಶ್ಯಕತೆಯನ್ನು ಗಮನಿಸಿ ಯಾವುದೇ ಸರಕಾರದ ಅನುದಾನವನ್ನು ಕಾಯದೆ ಸ್ವತಃ ಊರಿನ ಜವಾಬ್ದಾರಿಯುತವಾದ ಸಂಘ ಸಂಸ್ಥೆಗಳ ಸಹಕಾರದಲ್ಲಿ, ಊರಿನ ದಾನಿಗಳ ಸಹಕಾರದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಯಿತು. ಕೊಡವೂರು ಶಾಲೆಯಲ್ಲಿ ಕಳೆದ 30 ವರ್ಷಕ್ಕಿಂತ ಅಧಿಕ ವರ್ಷ ಸೇವೆ ಸಲ್ಲಿಸಿದ ಶಿಕ್ಷಕರಾದ ಮಲ್ಲಿಕಾದೇವಿಯವರನ್ನು ಬೀಳ್ಕೊಡುವ ಮುಖಾಂತರ ಅವರ ಮತ್ತು ಶಾಲೆಯ ಸಂಬಂಧವನ್ನು ನೆನಪು ಮಾಡುವ ಕಾರ್ಯ ಇದಾಗಿದೆ. ಈ ಮುಖಾಂತರ ಕೊಡವೂರಿನ ನಾಗರಿಕರಿಗೆ […]