ರಜತ ಸಂಭ್ರಮದಲ್ಲಿ ಕೊಡವೂರು ಬ್ರಾಹ್ಮಣ ಮಹಾಸಭಾ: ಏ.14ರಂದು ಒಂದು ವರ್ಷದ ‘ರಜತ ಪಥದಲ್ಲಿ ವಿಪ್ರ ನಡಿಗೆ’ ಕಾರ್ಯಕ್ರಮಕ್ಕೆ ಚಾಲನೆ
ಮಲ್ಪೆ: ಕೊಡವೂರು ಬ್ರಾಹ್ಮಣ ಮಹಾಸಭಾ 1996ರಲ್ಲಿ ಆರಂಭವಾಗಿ ಇದೀಗ 2022ರಲ್ಲಿ ಸಂಸ್ಥೆಯು 25 ಸಾರ್ಥಕ ಸಂವತ್ಸರಗಳನ್ನು ಪೂರೈಸಲಿದ್ದು, ಈ ಹಿನ್ನೆಲೆಯಲ್ಲಿ ಎಪ್ರಿಲ್ 2021ರಿಂದ ಎಪ್ರಿಲ್ 2022 ರವರೆಗೆ ಒಂದು ವರ್ಷದ ಕಾಲ ‘ರಜತ ಪಥದಲ್ಲಿ ವಿಪ್ರ ನಡಿಗೆ’ ಎಂಬ ಶಿರೋನಾಮೆಯಡಿಯಲ್ಲಿ ರಜತೋತ್ಸವವನ್ನು ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶಾಶ್ವತ ಕಾರ್ಯಕ್ರಮಗಳೊಂದಿಗೆ ಬಹಳ ವಿಜ್ರಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಮಹಾಸಭಾ ನಿರ್ಧರಿಸಿದೆ. ಅದರಂತೆ ಇದೇ ಎಪ್ರಿಲ್ 14ರಂದು ಯುಗಾದಿಯ ಪರ್ವ ಕಾಲದಲ್ಲಿ ಕೊಡವೂರಿನ ವಿಪ್ರಶ್ರೀ ಕಲಾಭವನದಲ್ಲಿ ‘ಕೊಡವೂರು […]