ಕೊಡವೂರು ಶಂಕರನಾರಾಯಣ ದೇಗುಲ: ರಾಶಿಪೂಜಾ ಮಹೋತ್ಸವ ಸಂಪನ್ನ
ಉಡುಪಿ: ಕೊಡವೂರು ಶಂಕರನಾರಾಯಣ ದೇವಸ್ಥಾನದ ವಾರ್ಷಿಕ ರಾಶಿಪೂಜಾ ಮಹೋತ್ಸವವು ಗುರುವಾರ ವಿಜೃಂಭಣೆಯಿಂದ ನೆರವೇರಿತು. ದೇಗುಲದ ತಂತ್ರಿ ವೇದಮೂರ್ತಿ ಪುತ್ತೂರು ಹಯವದನ ತಂತ್ರಿಗಳು ಹಾಗೂ ತಂಡದವರ ನೇತೃತ್ವದಲ್ಲಿ ಗುರುವಾರ ಸುರ್ಯೋದಯದಿಂದ ಶುಕ್ರವಾರ ಬೆಳಿಗ್ಗೆ ಸುರ್ಯೋದಯವರೆಗೆ 24 ಗಂಟೆ ಜರಗಿತು. ರಾಶಿಪೂಜಾ ಮಹೋತ್ಸವವು ವಾದ್ಯ, ಸಂಗೀತ, ಭರತನಾಟ್ಯ, ಯಕ್ಷಗಾನ, ಭಜನೆ, ಕೀರ್ತನೆ ಅಷ್ಟಾವಧಾನ ಪೂಜೆಯೊಂದಿಗೆ ಸಂಪನ್ನಗೊಂಡಿತು. ಆರೂರು ಶ್ರೀ ವಿಷ್ಣುಮೂರ್ತಿ ತಂಡದಿಂದ ನಾಮ ಸಂಕೀರ್ತನೆ ನಡೆಯಿತು. 12 ಹರಿವಾಣದಲ್ಲಿ 12 ರಾಶಿಗಳ ಉಬ್ಬು ಚಿತ್ರ ರಚಿಸಿ ಶಂಕರನಾರಾಯಣ ದೇವರನ್ನು ಅಲಂಕರಿಸಲಾಗಿತ್ತು. […]