ಪಟ ಪಟ ಹಾರೋ ಗಾಳಿಪಟ ಹೇಳಿತು ಮತದಾನದ ಸಂದೇಶ !

ಉಡುಪಿ: ಶನಿವಾರ ಸಂಜೆ ಮಲ್ಪೆಯ ಕಡಲತೀರದಲ್ಲಿ  ವಿಹರಿಸಲು ಬಂದವರಿಗೆ ಆಶ್ಚರ್ಯ ಕಾದಿತ್ತು,  ಕಡಲತೀರದಲ್ಲಿ ಅಂಗವಿಕಲರ ಬೈಕ್ ಜಾಥಾ, ಅಂಗವಿಕಲ ಮಕ್ಕಳ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮ, ಮೇಲೆ ನೋಡಿದರೆ ಬಾನಂಗಳದಲ್ಲಿ ಮತದಾನ ಸಂದೇಶ ಸಾರುವ ಅತ್ಯಾಕರ್ಷಕ ಗಾಳಿಪಟಗಳ ಹಾರಾಟ, ನೆರೆದಿದ್ದ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಿದವು. ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಮಲ್ಪೆ ಬೀಚ್ ಅಭಿವೃಧ್ದಿ ಸಮಿತಿ ಸಹಯೋಗದಲ್ಲಿ ನಡೆದ ಮತದಾನ ಜಾಗೃತಿ ಮೂಡಿಸುವ ಸ್ವೀಪ್ ಕಾರ್ಯಕ್ರಮದಲ್ಲಿ , ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ವಿಕಲಚೇತನರು, ಮತದಾನ […]