ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಕಿರಣ್ ಕುಮಾರ್ ಉದ್ಯಾವರ
ಉಡುಪಿ: ಕಾಂಗ್ರೆಸ್ ಮುಖಂಡ ಕಿರಣ್ ಕುಮಾರ್ ಉದ್ಯಾವರ ಅವರು ಇಂದು ಶಾಸಕ ಲಾಲಾಜಿ ಆರ್ ಮೆಂಡನ್ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು. ಕಿರಣ್ ಅವರು ಪ್ರಸ್ತುತ ಯುವ ಕಾಂಗ್ರೆಸ್ ಕಾಪು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷನಾಗಿ ಸೇವೆ ಕಾರ್ಯನಿರ್ವಹಿಸುತ್ತಿದ್ದರು. ಇದರ ಜೊತೆಗೆ ಉದ್ಯಾವರಹಿತ್ಳು ಮೊಗವೀರ ಗ್ರಾಮ ಸಭಾದ ಉಪಾಧ್ಯಕ್ಷ ಹಾಗೂ ಹದಿನಾಲ್ಕು ಪಟ್ನ ಮೊಗವೀರ ಗ್ರಾಮ ಸಭಾದ ಕಮಿಟಿ ಸದಸ್ಯರಾಗಿದ್ದರು. ಆದರೆ ದಿಢೀರ್ ಆಗಿ ಉಂಟಾದ ರಾಜಕೀಯ ಬೆಳವಣಿಗೆಯಿಂದ ಕಿರಣ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು. […]