ಕಿನ್ನಿಮೂಲ್ಕಿ: ಬಡ ಮೀನುಗಾರರ ತಾತ್ಕಾಲಿಕ ಶೆಡ್ ಏಕಾಏಕಿ ತೆರವು; ನಗರಸಭೆ ನಡೆಗೆ ಸಾರ್ವಜನಿಕರಿಂದ ಆಕ್ರೋಶ

ಉಡುಪಿ: ಉಡುಪಿ ನಗರಸಭೆಯ ಅಮಾನವೀಯ ನಡವಳಿಕೆಯಿಂದಾಗಿ ಕಿನ್ನಿಮೂಲ್ಕಿ ಪರಿಸರದ ಮೀನುಗಾರರು ಬವಣೆ ಅನುಭವಿಸುವಂತಾಗಿದೆ. ಅಕ್ರಮ ನಿರ್ಮಾಣದ ನೆಪದಲ್ಲಿ ಕಿನ್ನಿಮೂಲ್ಕಿ ಪರಿಸರದಲ್ಲಿರುವ ಮೀನುಗಾರರ ತಾತ್ಕಾಲಿಕ ಶೆಡ್ ಅನ್ನು ಏಕಾಏಕಿ ತೆರವುಗೊಳಿಸಿದ್ದು, ನಗರಸಭೆಯ ಈ ನಡೆಗೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ. ಉಡುಪಿಯ ಸ್ವಾಗತ ಗೋಪುರದ ದ್ವಾರದ ಬಳಿ ಬಡ ಮೀನುಗಾರರು ನಾಲ್ಕು ದಶಕಗಳಿಂದ ಮೀನು ಮಾರಾಟ ನಡೆಸುತ್ತಿದ್ದು, ಮಳೆ-ಬಿಸಿಲಿನಿಂದ ರಕ್ಷಣೆಗಾಗಿ ಶೆಡ್ ನಿರ್ಮಿಸಿಕೊಡುವಂತೆ ನಗರಸಭೆಗೆ ಅಹವಾಲು ಮಾಡಿದ್ದರೂ ಕ್ಯಾರೇ ಅನ್ನದ ಅಧಿಕಾರಿಗಳ ನಡೆಗೆ ಬೇಸತ್ತು, ಸ್ಥಳೀಯ ನಗರಸಭಾ ಸದಸ್ಯೆ ತನ್ನ […]

ಉಡುಪಿ: ಇಬ್ಬರು ಬೈಕ್ ಕಳ್ಳರ ಬಂಧನ 

ಉಡುಪಿ: ಜುಲೈ 2ರಂದು‌ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿ ಕಿನ್ನಿಮುಲ್ಕಿಯಲ್ಲಿ ಎರಡು‌ ಪಲ್ಸರ್ ಬೈಕ್ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಮಲ್ಪೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಮಂಗಳೂರಿನ ವಳಚಿಲ್ ನಿವಾಸಿಗಳಾದ ಮಹಮ್ಮದ್ ಸಮೀರ್(21), ಮೊಹಮ್ಮದ್ ಅಲ್ತಾಪ್ (21) ಬಂಧಿತ ಆರೋಪಿಗಳು. ನಗರದ ಕರಾವಳಿ ಬೈಪಾಸ್‌ನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 80 ಸಾವಿರ ಮೌಲ್ಯದ 2 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಮಲ್ಪೆ ಪಿಎಸ್‌ಐ ಮಧು ಬಿ.ಇ, ಎಎಸ್‌ಐ ಸುದಾಕರ ಬಿ, ಎಎಸ್‌ಐ ರತ್ನಾಕರ ಕೆ, ಹೆಡ್‌ಕಾನ್‌ಸ್ಟೇಬಲ್ಗಳಾದ ರತ್ನಾಕರ, ಪ್ರವೀಣ್, ಸಂತೋಷ್, […]