ಉಡುಪಿ: ಇಬ್ಬರು ಬೈಕ್ ಕಳ್ಳರ ಬಂಧನ 

ಉಡುಪಿ: ಜುಲೈ 2ರಂದು‌ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿ ಕಿನ್ನಿಮುಲ್ಕಿಯಲ್ಲಿ ಎರಡು‌ ಪಲ್ಸರ್ ಬೈಕ್ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಮಲ್ಪೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಮಂಗಳೂರಿನ ವಳಚಿಲ್ ನಿವಾಸಿಗಳಾದ ಮಹಮ್ಮದ್ ಸಮೀರ್(21), ಮೊಹಮ್ಮದ್ ಅಲ್ತಾಪ್ (21) ಬಂಧಿತ ಆರೋಪಿಗಳು. ನಗರದ ಕರಾವಳಿ ಬೈಪಾಸ್‌ನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 80 ಸಾವಿರ ಮೌಲ್ಯದ 2 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಮಲ್ಪೆ ಪಿಎಸ್‌ಐ ಮಧು ಬಿ.ಇ, ಎಎಸ್‌ಐ ಸುದಾಕರ ಬಿ, ಎಎಸ್‌ಐ ರತ್ನಾಕರ ಕೆ, ಹೆಡ್‌ಕಾನ್‌ಸ್ಟೇಬಲ್ಗಳಾದ ರತ್ನಾಕರ, ಪ್ರವೀಣ್, ಸಂತೋಷ್, ವಿಕ್ರಂ ಬೆರೆಟ್ಟೊ, ಕಾನ್‌ಸ್ಟೇಬಲ್ಗಳಾದ ಚೇತನ್ ಪಿತ್ರೋಡಿ, ರವಿರಾಜ್, ಸದ್ದಾಂ ಹುಸೇನ್,ರಘು ಮತ್ತು ಸಿಡಿಆರ್ ವಿಭಾಗದ ಶಿವಾನಂದ್ ಕಾರ್ಯಚರಣೆ ತಂಡದಲ್ಲಿದ್ದರು.