ಕಿದಿಯೂರು ಹೋಟೆಲ್ ಕಾರಣಿಕ ನಾಗ ಸನ್ನಿಧಿಯಲ್ಲಿ ಬ್ರಹ್ಮಕುಂಬಾಭಿಷೇಕ, ರಜತ ಕವಚ ಸಮರ್ಪಣೆ
ಉಡುಪಿ: ಕಿದಿಯೂರು ಹೋಟೆಲ್ ಕಾರಣಿಕ ನಾಗ ಸನ್ನಿಧಿಯಲ್ಲಿ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವ ಅಂಗವಾಗಿ ನಾಗದೇವರಿಗೆ ವಿಶೇಷ ಅಲಂಕಾರವು ವೇ. ಮೂ. ಕಬಿಯಾಡಿ ಜಯರಾಮ ಆಚಾರ್ಯ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಾಗ ದೇವರಿಗೆ ನೂತನವಾಗಿ ನಿರ್ಮಿಸಿದ ಭವ್ಯ ರಜತ ಮಂಟಪ, ರಜತ ಕವಚ ಮತ್ತು ಸ್ವರ್ಣ ಲೇಪಿತ ರಜತ ಪ್ರಭಾವಳಿ, ರಜತ ಬಲಿ ಮೂರ್ತಿಯನ್ನು ಸಮರ್ಪಿಸಲಾಯಿತು. ಬುಧವಾರ ಮೀನ ಲಗ್ನದ ಸುಮೂರ್ತಹದಲ್ಲಿ ಅಷ್ಟೋತ್ತರ ಶತ ಕಲಶಾಭಿಷೇಕದ ಧಾರ್ಮಿಕ ಪೂಜಾ ವಿಧಿ ವಿಧಾನಗಳೊಂದಿಗೆ ಬ್ರಹ್ಮಕುಂಬಾಭಿಷೇಕ, ಪ್ರಸನ್ನ ಪೂಜೆ ನಡೆಯಿತು. […]