ಅಗ್ನಿಪಥ್‌ಗೆ ಪೂರಕವಾದ ಕೋಟಿ ಚೆನ್ನಯ್ಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ಉದ್ಘಾಟನೆ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಅಗ್ನಿಪಥ್‌ಗೆ ಪೂರಕವಾದ ಕೋಟಿ ಚೆನ್ನಯ್ಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ಉಡುಪಿ ಇದರ ಉದ್ಘಾಟನಾ ಸಮಾರಂಭ ಹಾಗೂ ಅರ್ಹತಾ ಪತ್ರ ವಿತರಣೆ ಕಾರ್ಯಕ್ರಮವು ಸೆಪ್ಟಂಬರ್ 5 ರಂದು ಮಧ್ಯಾಹ್ನ 2.30 ಕ್ಕೆ ಉಡುಪಿ ಕಿದಿಯೂರು ಹೋಟೆಲ್‌ನ ಶೇಷಶಯನ ಹಾಲ್‌ನಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಭಾರತ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವ ರಾಜೀವ […]

ಆಗಸ್ಟ್ 7: ವಿದ್ಯಾರ್ಥಿ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಪ್ರಗತಿ ಅಸೋಸಿಯೇಟ್ ಪ್ರಸ್ತುತ ಪಡಿಸುತ್ತಿದೆ 5 ನೇ ಮಹಾ ಉದ್ಯೋಗ ಮೇಳ

ಉಡುಪಿ: ಸರಿಯಾದ ಉದ್ಯೋಗಕ್ಕಾಗಿ ಅಲೆದಾಡುತ್ತಿರುವವರಿಗೆ ಅಥವಾ ಹೊಸ ವೃತ್ತಿ ಜೀವನದ ಹುಡುಕಾಟದಲ್ಲಿರುವವರಿಗೆ ಪ್ರಗತಿ ಅಸೋಸಿಯೇಟ್ ಪ್ರಸ್ತುತ ಪಡಿಸುತ್ತಿದೆ 5 ನೇ ಮಹಾ ಉದ್ಯೋಗ ಮೇಳ. ಆಗಸ್ಟ್ 7 ಭಾನುವಾರದಂದು ಬೆಳಿಗ್ಗೆ 10.00 ರಿಂದ ಸಂಜೆ 5.00 ಗಂಟೆವರೆಗೆ ನಗರದ ಕಿದಿಯೂರು ಹೋಟೆಲಿನ ಪವನ್ ರೂಫ್ ಟಾಪ್ ನಲ್ಲಿ ಉದ್ಯೋಗ ಮೇಳ ನಡೆಯಲಿದ್ದು, ಸ್ಥಳೀಯ ಉದ್ಯಮಗಳು ಹಾಗೂ ಕೈಗಾರಿಕೆಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು, ಸ್ಥಳೀಯ ವಿದ್ಯಾರ್ಥಿಗಳು ಹಾಗೂ ವೃತ್ತಿ ಅನ್ವೇಷಕರು ಸಂದರ್ಶನದಲ್ಲಿ ಭಾಗವಹಿಸಿ ಕನಸಿನ ಉದ್ಯೋಗವನ್ನು ತಮ್ಮದಾಗಿಸಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ […]