ಕೆಜಿಎಫ್ ಹಾಡು ಹಕ್ಕುಸ್ವಾಮ್ಯ ಚ್ಯುತಿ ಆರೋಪ: ಕಾಂಗ್ರೆಸ್ ನಾಯಕರ ಮೇಲಿನ ಎಫ್ಐಆರ್ ವಜಾಗೊಳಿಸಲು ಕರ್ನಾಟಕ ಹೈಕೋರ್ಟ್ ನಕಾರ

ಬೆಂಗಳೂರು: ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕನ್ನಡ ಚಲನಚಿತ್ರ ಕೆಜಿಎಫ್ ಅಧ್ಯಾಯ 2 ರ ಸಂಗೀತದ “ಅನಧಿಕೃತ” ಬಳಕೆ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಸುಪ್ರಿಯಾ ಶ್ರೀನಟೆ ವಿರುದ್ಧದ ಎಫ್ಐಆರ್ ಅನ್ನು ವಜಾಗೊಳಿಸಲು ಕರ್ನಾಟಕ ಹೈಕೋರ್ಟ್ ಬುಧವಾರ ನಿರಾಕರಿಸಿದೆ. ನವೆಂಬರ್ 2022 ರಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕನ್ನಡ ಚಲನಚಿತ್ರ ಕೆಜಿಎಫ್ ಅಧ್ಯಾಯ 2 ರ ಸಂಗೀತವನ್ನು ಅನಧಿಕೃತವಾಗಿ ಬಳಸಲಾಗಿದೆ ಎಂದು ಎಂ.ಆರ್.ಟಿ ಸಂಗೀತ ಕಂಪನಿ ನೀಡಿದ ದೂರಿನ […]

ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ಘಟಾನುಘಟಿಗಳಿಂದ ಶುಭಾಶಯಗಳ ಸುರಿಮಳೆ

ಕನ್ನಡ ಚಿತ್ರರಂಗದ ಮ್ಯಾಡ್ ಮಾನ್ ಖ್ಯಾತಿಯ, ಕೆ.ಜಿ.ಎಫ್ ನಿರ್ದೇಶಕ ಪ್ರಶಾಂತ್ ನೀಲ್ ಇಂದು ತಮ್ಮ ಜನ್ಮ ದಿನವನ್ನು ಆಚರಿಸುತ್ತಿದ್ದು, ಸಲಾರ್ ಚಿತ್ರತಂಡ, ಪ್ರಭಾಸ್ ಹಾಗೂ ಹೊಂಬಾಳೆ ಫಿಲ್ಮ್ಸ್ ಆದಿಯಾಗಿ ಎಲ್ಲರೂ ಶುಭಾಶಯಗಳನ್ನು ಕೋರುತ್ತಿದ್ದಾರೆ. ಕನ್ನಡ ಚಿತ್ರ ರಂಗದ ದಿಕ್ಕು-ದೆಸೆಯನ್ನು ಬದಲಾಯಿಸಿದ ಕೆ.ಜಿ.ಎಫ್ ಚಿತ್ರದ ಹಿಂದಿನ ಶಕ್ತಿ ಪ್ರಶಾಂತ್ ನೀಲ್. ತಮ್ಮ ಕಲ್ಪನೆಯನ್ನು ಚಿತ್ರಪರದೆಯ ಮೇಲೆ ಅತ್ಯಂತ ಅದ್ದೂರಿಯಿಂದ ತೋರಿಸುವ ನಿರ್ದೇಶಕರಲ್ಲಿ ಪ್ರಶಾಂತ್ ಕೂಡಾ ಒಬ್ಬರು. ಪ್ರಶಾಂತ್ ಇದೀಗ ಪ್ರಭಾಸ್ ಮುಖ್ಯ ಭೂಮಿಕೆಯಲ್ಲಿರುವ ಸಲಾರ್ ಚಿತ್ರದ ನಿರ್ದೇಶನದಲ್ಲಿ ವ್ಯಸ್ತರಾಗಿದ್ದು, […]

ದಾಖಲೆ ಬೆಲೆಗೆ ಮಾರಾಟವಾಯ್ತು ಬಾಕ್ಸ್ ಆಫೀಸ್ ಬಾಹುಬಲಿ ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ವಿದೇಶೀ ಹಕ್ಕು!

ಭಾರತೀಯ ಚಿತ್ರರಂಗದ ಬಾಹುಬಲಿ ಎಂದೇ ಖ್ಯಾತನಾಮ ಪ್ರಭಾಸ್, ಬಾಕ್ಸ್ ಆಫೀಸ್ ಕೊಳ್ಳೆಹೊಡೆಯುವ ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಹಾಗೂ ಕೆ.ಜಿ.ಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೋಡಿಯ “ಸಲಾರ್” ಚಿತ್ರವು ಬಿಡುಗಡೆಗೂ ಮುನ್ನವೇ ಸದ್ದುಮಾಡುತ್ತಿರುವ ವರದಿಗಳಾಗಿವೆ. ವರದಿಗಳನ್ನು ನಂಬುವುದಾದರೆ, ಸಲಾರ್‌ನ ವಿದೇಶಿ ಹಕ್ಕುಗಳು 90 ರಿಂದ100 ಕೋಟಿ ರೂ.ಗೆ ಮಾರಾಟವಾಗಿದೆ. ಈ ಅಂಕೆಯೊಂದಿಗೆ, ಪ್ರಭಾಸ್ ಅಭಿನಯದ ಸಲಾರ್ ಚಿತ್ರವು ಅತಿ ಹೆಚ್ಚು ವಿದೇಶಿ ಹಕ್ಕುಗಳ ಒಪ್ಪಂದ ಹೊಂದಿದ ತೆಲುಗು ಚಲನಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 💥 BREAKING 💥#Prabhas's […]

ಚಿತ್ರನಟ ಅನಂತ್ ನಾಗ್ ಇಂದು ಬಿಜೆಪಿಗೆ ಸೇರ್ಪಡೆ

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ಅನಂತ್ ನಾಗ್ ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸಂಜೆ 4.30ಕ್ಕೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್​ ನೇತೃತ್ವದಲ್ಲಿ ಬಿಜೆಪಿಗೆ ಸೇರುತ್ತಿದ್ದಾರೆ ಎಂದು ವರದಿಯಾಗಿದೆ. 1980 ರಲ್ಲೇ ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡಿರುವ ಅನಂತ್ ನಾಗ್ 1983ರಲ್ಲಿ ಜನತಾ ಪಕ್ಷದ ಪ್ರಚಾರಕರಾಗಿದ್ದರು. 1985 ಮತ್ತು 1989 ರಲ್ಲಿಯೂ ಪಕ್ಷದ ಪ್ರಚಾರಕರಾಗಿ ಗುರುತಿಸಿಕೊಂಡ ಇವರು, 1983ರಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಶಿವರಾಮ ಕಾರಂತರ […]

ಮಡದಿ ಮಕ್ಕಳ ಜೊತೆ ಸಂಕ್ರಾತಿ ಆಚರಿಸಿದ ರಾಕಿಂಗ್ ಸ್ಟಾರ್ ಯಶ್

ಹಾಸನದಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ರಾಕಿಂಕ್ ಸ್ಟಾರ್, ರಾಕಿ ಭಾಯ್ ಖ್ಯಾತಿಯ ಚಿತ್ರನಟ ಯಶ್ ಸಂಕ್ರಾತಿ ಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ. ತಂದೆ, ತಾಯಿ, ಪತ್ನಿ ರಾಧಿಕಾ ಪಂಡಿತ್ ಮಕ್ಕಳಾದ ಆಯ್ರಾ ಮತ್ತು ಯಥರ್ವ್‌ ಜೊತೆಗೆ ಯಶ್ ಹಬ್ಬವನ್ನು ಆಚರಿಸಿದ್ದಾರೆ. ಈ ಚಿತ್ರಗಳನ್ನು ಅವರು ಟ್ವಿಟರ್ ನಲ್ಲಿಹಂಚಿಕೊಂಡಿದ್ದಾರೆ.