ಎಲ್ಲೆಲ್ಲೂ ‘ಸಲಾರ್’ ಟ್ರೈಲರ್ ಅಬ್ಬರ: ಕೋಟಿಗೂ ಮಿಕ್ಕ ವೀಕ್ಷಣೆಗಳು; ಡಿ.22 ರಂದು ಬೆಳ್ಳಿ ತೆರೆಗೆ ಬರಲು ಸಿದ್ದ!
ದೇಶಾದ್ಯಂತ ಅದ್ದೂರಿ ಬಿಡುಗಡೆಗೆ ಇನ್ನೇನು ಕೆಲವೇ ಕ್ಷಣಗಳು ಬಾಕಿ ಇದೆ ಎನ್ನುವಾಗ ‘ಸಲಾರ್: ಭಾಗ 1 – ಸೀಸ್ ಫೈರ್’ ಬಿಗ್-ಬಜೆಟ್ ಚಿತ್ರದ ಬಹುನಿರೀಕ್ಷಿತ ಟ್ರೈಲರ್ ಅನ್ನು ಹೊಂಬಾಳೆ ಫಿಲಮ್ಸ್ ಬಿಡುಗಡೆ ಮಾಡಿದೆ. ಕೆ.ಜಿ.ಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮತ್ತು ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಪಾತ್ರದಲ್ಲಿರುವ ಸಲಾರ್-1 ರ ಟ್ರೈಲರ್ ಬಿಡುಗಡೆ ಹೊಂದುತ್ತಲೇ ಜನರಲ್ಲಿ ಹುಚ್ಚನ್ನು ಉಂಟುಮಾಡಿದೆ. ಅದಾಗಲೇ ಕೋಟಿ ವೀಕ್ಷಣೆಗಳನ್ನು ದಾಟಿರುವ ಸಲಾರ್ ಅಬ್ಬರಕ್ಕೆ ಚಿತ್ರರಸಿಕರು ಬೇಸ್ತು ಬಿದ್ದಿದ್ದಾರೆ. […]