ಎಡನೀರು ಕೇಶವಾನಂದ ಭಾರತೀ ಸ್ವಾಮೀಜಿ ವಿಧಿವಶ
ಕಾಸರಗೋಡು: ಎಡನೀರು ಜಗದ್ಗುರು ಶಂಕರಾಚಾರ್ಯ ಸಂಸ್ಥಾನದ ಮಠಾಧೀಶ ಕೇಶವಾನಂದ ಭಾರತೀ ಸ್ವಾಮೀಜಿ (76) ಶನಿವಾರ ಮಧ್ಯರಾತ್ರಿ ಇಹಲೋಕ ತ್ಯಜಿಸಿದರು. ಎಡನೀರು ಸ್ವಾಮೀಜಿ ಕಲಾವಿದರ ಬಗ್ಗೆ ವಿಶೇಷ ಗೌರವ ಪ್ರೀತಿ ಹೊಂದಿದ್ದರು. ಸ್ವತಃ ಸಂಗೀತ ಮತ್ತು ಭಾಗವತಿಕೆಯ ಕಲಾವಿದರಾಗಿ, ಯಕ್ಷಗಾನ ಮೇಳವನ್ನು ನಡೆಸಿದ್ದರು. ಸಾಹಿತ್ಯ, ಸಾಂಸ್ಕೃತಿಕ ಸಮ್ಮೇಳನ, ಯಕ್ಷಗಾನ, ಭರತನಾಟ್ಯ , ಸಂಗೀತಾದಿ ಕಾರ್ಯಕ್ರಮಗಳನ್ನು ಮಾಡಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಮಠದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ ಶ್ರೀಗಳು ಹರಿಕಥೆಯನ್ನೂ ಮಾಡುತ್ತಿದ್ದರು. ಕರಾವಳಿಯ ಪ್ರಸಿದ್ದ ಯಕ್ಷಗಾನದ ಮೇಲೆ ವಿಶೇಷ ಒಲವಿದ್ದ […]