ಕಡಿಯಾಳಿ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಕೆಸರುಗದ್ದೆ ಕ್ರೀಡಾಕೂಟ

ಉಡುಪಿ: ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಕಡಿಯಾಳಿ ದೇವಸ್ಥಾನ ವಠಾರದಲ್ಲಿ ಭಾನುವಾರ ‘ಕೆಸರು ಗದ್ದೆ’ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಯಿತು. ಗದ್ದೆಗೆ ಇಳಿದ ನೂರಾರು ಮಂದಿ ಕೆಸರು ನೀರಿನಲ್ಲಿ ಮಿಂದೆದ್ದರು. ಒಬ್ಬರ ಮೇಲೊಬ್ಬರು ಕೆಸರು ಎರಚಿಕೊಂಡು ಸಂಭ್ರಮಿಸಿದರು. ಹಿರಿಯರು ಕಿರಿಯರೊಂದಿಗೆ ಸೇರಿಕೊಂಡು ಕೆಸರಿನಲ್ಲಿ ಕೆಲ ಸಮಯ ಕಳೆದರು. ಕಡಿಯಾಳಿ ದೇಗುಲದ ವಠಾರದ ಗದ್ದೆಯಲ್ಲಿ ಗ್ರಾಮೀಣ ಸೊಗಡು ಅನಾವರಣಗೊಂಡಿತ್ತು. ಕ್ರೀಡಾಕೂಟದ ಅಂಗವಾಗಿ ಹಗ್ಗಜಗ್ಗಾಟ, ವಾಲಿಬಾಲ್‌, ಕೆಸರು ಗದ್ದೆ ಓಟ, ಹಿಮ್ಮುಖ ಓಟ, ಹಾಳೆ ಎಳೆತ, ಜೋಡಿ ಓಟ, […]