ಗೋಕಳ್ಳರ ವಿರುದ್ಧ ಹೋರಾಡಲು ಪ್ರತಿ ಮನೆಯಲ್ಲೂ ಖಡ್ಗ ಇಟ್ಟುಕೊಳ್ಳಿ: ಸಾಧ್ವಿ ಸರಸ್ವತಿ

ಕಾರ್ಕಳ: ಹಟ್ಟಿಗೆ ನುಗ್ಗಿ ಗೋಕಳ್ಳತನ ಮಾಡುವವರ ವಿರುದ್ಧ ಹೋರಾಡಲು ಪ್ರತಿ ಮನೆಯಲ್ಲೂ ಖಡ್ಗ (ಆಯುಧ) ವನ್ನು ಇಟ್ಟುಕೊಳ್ಳಬೇಕು. ಖಡ್ಗದ ಮೂಲಕ ಗೋಕಳ್ಳರಿಗೆ ಉತ್ತರ ಕೊಡಬೇಕು. ಗೋರಕ್ಷಣೆಗಾಗಿ ಹಿಂದೂಗಳು ಈ ಕಾರ್ಯ ಮಾಡಲೇ ಬೇಕಾಗಿದೆ ಎಂದು ಸಾಧ್ವಿ ಸರಸ್ವತಿ ಹೇಳಿದರು. ಕಾರ್ಕಳ ವಿಶ್ವ ಹಿಂದೂ ಪರಿಷದ್ ಭಜರಂಗದಳದ ವತಿಯಿಂದ ಕಾರ್ಕಳದ ಗಾಂಧಿ ಮೈದಾನದ ಅಮರ ಸೇನಾನಿ ಜನರಲ್ ಬಿಪಿನ್ ರಾವತ್ ವೇದಿಕೆಯಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಸೈನಿಕರ ಅವಹೇಳನ ಮಾಡುವ ದ್ರೋಹಿಗಳ ಮಟ್ಟಹಾಕಬೇಕಿದೆ. […]