ಎಸಿಬಿ ಯಿಂದ ಅಹವಾಲು ಸ್ವೀಕಾರ

ಉಡುಪಿ, ಜೂನ್ 27: ಉಡುಪಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಯವರು ಜೂನ್ 28 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಬೈಂದೂರು ಪ್ರವಾಸಿ ಮಂದಿರದಲ್ಲಿ ಹಾಗೂ ಮಧ್ಯಾಹ್ನ 2.30 ರಿಂದ ಸಾಯಂಕಾಲ 4.30 ರವರೆಗೆ ಕುಂದಾಪುರ ಪ್ರವಾಸಿ ಮಂದಿರದಲ್ಲಿ ಮತ್ತು ಜೂನ್ 29 ರಂದು ಬೆಳಿಗ್ಗೆ 11 ಗಂಟೆಯಿಂದ 1 ಗಂಟೆಯವರೆಗೆ ಕಾರ್ಕಳ ಪ್ರವಾಸಿ ಮಂದಿರದಲ್ಲಿ ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 4.30 ರವರೆಗೆ ಹೆಬ್ರಿ ಪ್ರವಾಸಿ ಮಂದಿರದಲ್ಲಿ […]

ಸಾಲಿಗ್ರಾಮದಲ್ಲಿ ಸಾಧಕರಿಗೆ, ಹಿರಿಯ ಮಹಿಳೆಯರಿಗೆ ಸನ್ಮಾನ

ಕುಂದಾಪುರ: ಶ್ರೀ ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ ಇಲ್ಲಿನ ಜ್ಞಾನ ಮಂದಿರದಲ್ಲಿ ಮಹಿಳಾ ವೇದಿಕೆ, ಕೂಟ ಮಹಾಜಗತ್ತು ಸಾಲಿಗ್ರಾಮ,(ರಿ) ಸಾಲಿಗ್ರಾಮ ಅಂಗಸಂಸ್ಥೆ ವತಿಯಿಂದ ಸ್ಥಳೀಯ ಗ್ರಾಮದ ಹಿರಿಯ ಕ್ರಿಯಾ ಶೀಲ ಮಹಿಳೆಯರನ್ನು ಗೌರವಿಸಲಾಯಿತು. ಸಾಧಕ ಮಹಿಳೆಯಾರಾದ ಡಾ.ರೋಹಿಣಿ ಹಂದೆ, ಸಾಲಿಗ್ರಾಮ ಹಾಗೂ ಕೆ.ಶಾಂತಾ ಐತಾಳ್ ರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾದ ಅನಂತಪದ್ಮನಾಭ ಐತಾಳ, ಸಿ.ಚಿತ್ರಾ ಕಾರಂತ, ಶ್ರೀಪತಿ ಅಧಿಕಾರಿ ಮತ್ತು ಸನ್ಮಾನಿತರೊಂದಿಗೆಮಹಿಳಾ ವೇದಿಕೆ ಕಾರ್ಯಕರ್ತರು ಈ ಸಂಭ್ರಮದಲ್ಲಿ ಉಪಸ್ಥಿತರಿದ್ದರು