ಕಾವಿ ಕಲೆಯನ್ನು ಪುನರುಜ್ಜೀವಿಸಲು ಉಡುಪಿ ಸೀರೆ ಜೊತೆ ಕೈಜೋಡಿಸಿದ ವಿಶ್ವ ಕೊಂಕಣಿ ಕೇಂದ್ರ
ಮಂಗಳೂರು: ವಿಶ್ವ ಕೊಂಕಣಿ ಕೇಂದ್ರವು ಉಡುಪಿ ಸೀರೆಗಳ ಮೇಲೆ ಕಾವಿ ಕಲೆ ವಿನ್ಯಾಸಗಳನ್ನು ರೂಪಿಸಲು ಕದಿಕೆ ಟ್ರಸ್ಟ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕಾವಿ ಕಲೆ ಕಲಾ ಪ್ರಕಾರವನ್ನು ಭಾರತದ ಪಶ್ಚಿಮ ಕರಾವಳಿಯಾದ್ಯಂತ ಕೊಂಕಣಿ ದೇವಾಲಯಗಳಲ್ಲಿ ಸಂರಕ್ಷಿಸಲಾಗಿದೆ ಮತ್ತು ಪ್ರಚಾರ ಮಾಡಲಾಗಿದೆ. ಆದರೆ ದೇವಾಲಯದ ರಚನೆಗಳ ಆಧುನೀಕರಣದ ಕಾರಣದಿಂದಾಗಿ ಇದೀಗ ಈ ಕಲೆಯು ಅಪಾಯದಲ್ಲಿದೆ. ಉಡುಪಿ ಸೀರೆಗಳು ಸಾಂಪ್ರದಾಯಿಕ ಕೈಮಗ್ಗದ ಸೀರೆಗಳಾಗಿದ್ದು ಅಳಿವಿನ ಅಂಚಿನಲ್ಲಿರುವ ಈ ಸನಾತನ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಲು ಕದಿಕೆ ಟ್ರಸ್ಟ್ ನಿರಂತರವಾಗಿ ಶ್ರಮಿಸುತ್ತಿದೆ. ಇದೀಗ ಕಾವಿ ಕಲೆಯನ್ನು […]