ಬಣ್ಣದ ಬೆರಗಿನ ಯುವ ಕಲಾಕಾರ: ಇದು ಸುಳ್ಯದ ಕೌಶಿಕ್ ಅವರ ಚಮತ್ಕಾರ!

ಇವರ ಕೈಯಲ್ಲಿ ಮೂಡಿದ ಚಿತ್ರಗಳನ್ನು ನೋಡುತ್ತಿದ್ದರೆ ಆ ಚಿತ್ರದಲ್ಲಿರುವ ವ್ಯಕ್ತಿಗಳೇ ಕಣ್ಣೆದುರು ನಿಜಕ್ಕೂ ಬಂದಂತನ್ನಿಸುತ್ತದೆ.ಇಷ್ಟು ಚೆಂದ ಚಿತ್ರವನ್ನು ಕೈಯಲ್ಲಿ ಬಿಡಿಸಿದ್ದಾ ಎನ್ನುವ ಅಚ್ಚರಿ ಕೂಡ ನಮ್ಮಲ್ಲಿ ಹುಟ್ಟುತ್ತದೆ. ಇಂತಹ ಅಪೂರ್ವ ಚಿತ್ರ ಬರೆಯುವ ಈ ಕಲಾಕಾರನ ಹೆಸರು ಕೌಶಿಕ್ ಕೆ. ಎಂ. ಸುಳ್ಯ ತಾಲೂಕಿನ ಪಂಜ ನಿವಾಸಿವಾಗಿರುವ ಕೌಶಿಕ್ ಅವರು ಬಿಡಿಸುವ ಚಿತ್ರಗಳು ತಮ್ಮ ಅಪೂರ್ವ ಕಲಾವಂತಿಕೆಯಿಂದ,ಕಲಾತ್ಮಕ ನೋಟದಿಂದ ಗಮನಸೆಳೆಯುತ್ತದೆ. ಅಂದ ಹಾಗೆ ಕೌಶಿಕ್, ಚಿತ್ರಕಲೆಯನ್ನು ಅಭ್ಯಾಸ ಮಾಡಲು ತರಗತಿಗಳಿಗೆ ಹೋದವರಲ್ಲ, ಬಣ್ಣಗಳೊಡನೆ ಆಟವಾಡುತ್ತ ಚಿತ್ರಕಲೆಯನ್ನು ಅಭ್ಯಾಸ […]