ಕಾಪು: ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಚಂಡಿಕಾಯಾಗ
ಕಾಪು: ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಪ್ರಯುಕ್ತ ವರ್ಷಂಪ್ರತಿ ಜರಗುವ ಚಂಡಿಕಾ ಮಹಾಯಾಗ, ಪೂರ್ಣಾಹುತಿ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ಮಂಗಳವಾರದಂದು ನಡೆಯಿತು. ಆ ಪ್ರಯುಕ್ತ ಬೆಳಿಗ್ಗೆ 8 ಗಂಟೆಗೆ ಪ್ರಾರ್ಥನೆ, ಮಧ್ಯಾಹ್ನ 11:30ಕ್ಕೆ ಚಂಡಿಕಾಯಾಗ ಮಹಾ ಪೂರ್ಣಾಹುತಿ, ಪಲ್ಲಪೂಜೆ ಹಾಗೂ ಅನ್ನ ಸಂತರ್ಪಣೆ, 3:00 ಗಂಟೆಗೆ ಶ್ರೀ ಮಾರಿಯಮ್ಮ ದೇವಿಗೆ ಪ್ರಸನ್ನ ಪೂಜೆ, ಮೈ ದರ್ಶನ ಸೇವೆ, ಅಭಯ ಪ್ರಸಾದ ವಿತರಣೆ ನಡೆಯಿತು.
ಪ್ರಪ್ರಥಮ ಉಚ್ಚಿಲ ದಸರಾದಲ್ಲಿ ಏಕಕಾಲದಲ್ಲಿ ನವದುರ್ಗೆಯರಿಗೆ ಆರತಿ: ಕಾಪು ಕಡಲತೀರದಲ್ಲಿ ಕಣ್ಮನ ಸೆಳೆಯುವ ನೋಟ
ಕಾಪು: ಇದೇ ಮೊದಲ ಬಾರಿಗೆ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನವದುರ್ಗಾ ಸಹಿತ ಶಾರದಾ ಮಾತೆಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ನವರಾತ್ರಿಯ ಅಂತಿಮ ದಿನವಾದ ವಿಜಯದಶಮಿಯಂದು ದೇವಿಯರ ವಿಸರ್ಜನಾ ಕಾರ್ಯಕ್ರಮವು ಕಾಪು ಕಡಲ ತೀರದಲ್ಲಿ ಜರುಗಿತು. ದೇವಿಯರ ಜಲಸ್ತಂಭನದ ವೇಳೆಯಲ್ಲಿ ಜಿಲ್ಲೆಯು ಅಭೂತಪೂರ್ವ ದೃಶ್ಯವೊಂದಕ್ಕೆ ಸಾಕ್ಷಿಯಾಯಿತು. ಉತ್ತರಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಸಲಾಗುವ ಗಂಗಾ ಆರತಿ ಮಾದರಿಯಲ್ಲಿ ಶಾರದಾ ಮಾತೆ ಸಹಿತ ನವದುರ್ಗೆಯರಿಗೆ ಏಕಕಾಲದಲ್ಲಿ ಆರತಿ ಬೆಳಗುವ ಮೂಲಕ ಹೊಸ ಇತಿಹಾಸವೊಂದನ್ನು ಕರಾವಳಿಯ ಕಡಲ ಕಿನಾರೆಯಲ್ಲಿ ಸೃಷ್ಠಿಸಲಾಯಿತು. ದೇವಿಯರ ವೈಭವದ […]
ಕಾಪು: ಜುಲೈ 24 ರಂದು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿ ಪದಗ್ರಹಣ ಕಾರ್ಯಕ್ರಮ
ಕಾಪು: ಬ್ಲಾಕ್ ಕಾಂಗ್ರೆಸ್ ಸಮಿತಿ (ಉತ್ತರ) ಇದರ ಸಮಿತಿಯ ಪದಾಧಿಕಾರಿಗಳು ಪದಗ್ರಹಣ ಕಾರ್ಯಕ್ರಮ ಜುಲೈ 24 ರಂದು ಹಿರಿಯಡ್ಕದ ಸುರಭಿ ಬ್ಯಾಂಕ್ವೆಟ್ ಹಾಲ್ ನಲ್ಲಿ ಬೆಳಿಗ್ಗೆ 10.00 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಕಾಂಗ್ರೆಸ್ ನಾಯಕರುಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆಂದು ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ಉತ್ತರ)ದ ಅಧ್ಯಕ್ಷರಾದ ಸಂತೋಷ್ ಕುಲಾಲ್ ಪಕ್ಕಾಲು ಪ್ರಕಟಣೆಯಲ್ಲಿ […]
ಕಾಪು: ಕಡಲ್ಕೊರೆತ ಪ್ರದೇಶಕ್ಕೆ ಕೇಂದ್ರ ಸಚಿವೆ ಭೇಟಿ
ಉಡುಪಿ: ಕಾಪು ತಾಲೂಕಿನ ಮುಳೂರಿನ ಕಡಲ್ಕೊರೆತ ಪ್ರದೇಶಕ್ಕೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲಾಧಿಕಾರಿ ಕೂರ್ಮಾ ರಾವ್ ಜೊತೆಗಿದ್ದರು. ಕುಂದಾಪುರ ಎಸಿ ರಾಜು ಮತ್ತಿತರರು ಉಪಸ್ಥಿತರಿದ್ದರು. ಕೃಪೆ: ಟ್ವಿಟರ್
ಸೌಹಾರ್ದಯುತ ಬಕ್ರೀದ್ ಆಚರಣೆ: ಮುಂಜಾಗ್ರತಾ ಕ್ರಮ ವಹಿಸಲು ಕಾಂಗ್ರೆಸ್ ಅಲ್ಪ ಸಂಖ್ಯಾ ಘಟಕದಿಂದ ಕಾಪು ಠಾಣೆಯಲ್ಲಿ ಮನವಿ
ಕಾಪು: ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ವತಿಯಿಂದ ನಾಳೆ ಆಚರಿಸುತ್ತಿರುವ ಈದುಲ್ ಅದ್ಹಾ ಹಬ್ಬದಂದು ಕುರ್ಬಾನಿ ಮಾಡಲು, ಮತ್ತು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲು ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಶರ್ಫುಧ್ದೀನ್ ಶೇಖ್ ಇವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷ ಹಮೀದ್ ಯೂಸುಫ್, ಯೂತ್ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸ್ಯೆನ್, ಜಿಲ್ಲಾ ಕಾಂಗ್ರೆಸ್ ಮೀನುಗಾರರ […]