53 ದಿನಗಳ ಈಶಾನ್ಯ ರಾಜ್ಯ ಪ್ರವಾಸ ಮುಗಿಸಿದ ಕಾಪುವಿನ ಯುವಕರಿಗೆ ಮಾರಿಗುಡಿಯಲ್ಲಿ ಅಭಿನಂದನೆ

ಉಡುಪಿ: ಕರಾವಳಿ ಪ್ರವಾಸೋದ್ಯಮ, ಹೊಸ ಮಾರಿಗುಡಿಯ ಜೀರ್ಣೋದ್ಧಾರ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಪ್ರಚಾರ ನಡೆಸಿ, ಉತ್ತರ ಭಾರತ ಸಹಿತವಾಗಿ ಮೇಘಾಲಯ, ಮಿರಾಂ, ಒಡಿಶಾ ಸಹಿತ 19 ರಾಜ್ಯಗಳಲ್ಲಿ ಪ್ರವಾಸ ಕೈಗೊಂಡು ಮರಳಿದ ಶಟರ್ ಬಾಕ್ಸ್ ಖ್ಯಾತಿಯ ಕಾಪು ಸಚಿನ್‌ ಶೆಟ್ಟಿ ಮತ್ತು ಅಭಿಷೇಕ್ ಶೆಟ್ಟಿ ತಂಡವನ್ನು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಕಾಪುವಿಗೆ ಆಗಮಿಸಿದ ಸಚಿನ್ ಶೆಟ್ಟಿ ಮತ್ತು ಅವರ ತಂಡವನ್ನು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ […]