ಕಾಪು ಪ್ರಥಮ ದರ್ಜೆ ಕಾಲೇಜು: ವಿದ್ಯಾರ್ಥಿನಿಯರಿಗೆ ಸಾಫ್ಟ್ ಸ್ಕಿಲ್ಸ್ ಕುರಿತ ತರಬೇತಿ ಕಾರ್ಯಗಾರ

ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಇದರ ವತಿಯಿಂದ ನಾಂದಿ ಫೌಂಡೇಶನ್ ಮತ್ತು ಮಹೀಂದ್ರ ಫ್ರೆಂಡ್ ಕ್ಲಾಸ್ ರೂಮ್ ಇವರ ಸಹಯೋಗದೊಂದಿಗೆ ಕಾಪುವಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿಯರಿಗೆ ನಡೆದ ಸಾಫ್ಟ್ ಸ್ಕಿಲ್ಸ್ ಕುರಿತ ತರಬೇತಿ ಕಾರ್ಯಗಾರವನ್ನು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಜಗದೀಶ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಅರುಣ್ ಬಿ, ಜಿಲ್ಲಾ ಸಲಹೆಗಾರ್ತಿ ಸಂಧ್ಯಾರಾಣಿ,ನಾಂದಿ ಫೌಂಡೇಶನ್ ತರಬೇತುದಾರ ಚಿನ್ನೀ ಅಜಯ್, ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.