ಕಟಪಾಡಿ:ತ್ರಿಶಾ ಸಂಸ್ಥೆ ಅಟಲ್ ಇನ್‌ಕ್ಯೂಬೇಶನ್ ಸೆಂಟರ್, ನಿಟ್ಟೆ ಯೊಂದಿಗೆ ಒಡಂಬಡಿಕೆ
ಕಟಪಾಡಿ:ವಿದ್ಯಾರ್ಥಿಗಳಿಗೆ ಈಗಿನಿಂದಲೇ ವಾಣಿಜ್ಯೋದ್ಯಮದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ತ್ರಿಶಾ ಸಂಸ್ಥೆ ಅಟಲ್ ಇನ್‌ಕ್ಯೂಬೇಶನ್ ಸೆಂಟರ್, ನಿಟ್ಟೆ ಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು ಈ ಕಾರ್ಯಕ್ರಮವು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ನವೆಂಬರ್ 4 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಟಲ್ ಇನ್‌ಕ್ಯೂಬೇಶನ್ ಸೆಂಟರ್ (ಎಐಸಿ) ನ ಚೀಫ್ ಎಕ್ಸಿಕ್ಯೂಟಿವ್ ಆಫೀಸರಾದ ಡಾ. ಎ ಪಿ ಆಚಾರ್ ರವರು ಪ್ರಸ್ತುತ ಕಾಲಘಟ್ಟದಲ್ಲಿ ಕೌಶಲ್ಯಗಳನ್ನು ವೃದ್ಧಿಸಿಕೊಂಡು ಹೊಸ ಹೊಸ ಆಲೋಚನೆಯೊಂದಿಗೆ ಉದ್ಯಮಿಯಾಗುವ ಕನಸಿದ್ದವರಿಗೆ ಬೇಡಿಕೆ ಹೆಚ್ಚಿದೆ ಎಂದರು. […]