ಕಟೀಲು ದೇವಳಕ್ಕೆ ಭೇಟಿ ನೀಡಿದ ಚಿತ್ರನಟಿ ಶಿಲ್ಪಾ ಶೆಟ್ಟಿ ಕುಟುಂಬ
ಕಿನ್ನಿಗೋಳಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ತಮ್ಮ ಪತಿ ರಾಜ್ ಕುಂದ್ರಾ, ಮಕ್ಕಳು, ಸಹೋದರಿ ಶಮಿತಾ ಶೆಟ್ಟಿ ಮತ್ತು ತಾಯಿಯೊಂದಿಗೆ ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಹೆಣ್ಣು ಮಗು ಜನಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಲು ಶಿಲ್ಪಾ ದೇವರಿಗೆ ಸೀರೆಯನ್ನು ಅರ್ಪಿಸಿದರು. ಅನುವಂಶಿಕ ಅರ್ಚಕ ವಾಸುದೇವ ಆಸ್ರಣ್ಣ ಪ್ರಸಾದ ವಿತರಿಸಿದರು. ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಶ್ರೀ ಹರಿ ಆಸ್ರಣ್ಣ, ನ್ಯಾಯವಾದಿ ರವಿ ಪೂಜಾರಿ ಉಪಸ್ಥಿತರಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಿಂಗಪ್ಪ ಸೇರಿಗಾರ್ ಅವರಿಂದ ನಾಗಸ್ವರ […]
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ
ಕಿನ್ನಿಗೋಳಿ: ಇಲ್ಲಿನ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವವು ಸೆ.26 ರಿಂದ ಅ.5ರ ವರೆಗೆ ಜರಗಲಿದ್ದು ಪ್ರತೀ ದಿನ ಬೆಳಿಗ್ಗೆ 9:30 ರಿಂದ ಸರಸ್ವತಿ ಸದನದಲ್ಲಿ ಭಜನೆ, ಸಂಜೆ 5:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, 7:30 ರಿಂದ ಯಕ್ಷಗಾನ ಬಯಲಾಟ ಪ್ರದರ್ಶನ ಜರಗಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು ಮತ್ತು ಅನುವಂಶಿಕ ಮೊಕ್ತೇಸರ ಕೆ. ವಾಸುದೇವ ಅಸ್ರಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.