ಕಟಪಾಡಿ: ಕೋಟೆ ಗ್ರಾ.ಪಂ ಮಾಜಿ ಅಧ್ಯಕ್ಷೆ ಹೃದಯಾಘಾತದಿಂದ ವಿಧಿವಶ
ಕಟಪಾಡಿ: ಕೋಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ, ಗುಮಾಸ್ತೆ (ಕ್ಲಾರ್ಕ್) ಶಶಿಕಲಾ (52) ಅವರು ಹೃದಯಾಘಾತದಿಂದ ಶನಿವಾರ ನಿಧನರಾದರು. ಅವರು ಕಳೆದ ಸುಮಾರು 15 ವರ್ಷಗಳಿಂದ ಕೋಟೆ ಪಂಚಾಯತ್ನಲ್ಲಿ ಗುಮಾಸ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಸಂಜೆ 6 ಗಂಟೆಯ ಸುಮಾರಿಗೆ ಕಚೇರಿಯಿಂದ ಕರ್ತವ್ಯ ನಿಭಾಯಿಸಿಕೊಂಡು ಮನೆಗೆ ತೆರಳಿದ್ದರು. ಮುಂಜಾನೆ 3 ಗಂಟೆಯ ವೇಳೆ ಹೃದಯಾಘಾತವುಂಟಾಗಿದ್ದು, ಕೂಡಲೇ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಶಿಕಲಾ ಮೃತಪಟ್ಟಿದ್ದಾರೆ. ಶಶಿಕಲಾ ಅವರು 2000ನೇ ಅವಧಿಯಲ್ಲಿ ಕೋಟೆ ಪಂಚಾಯತ್ ಅಧ್ಯಕ್ಷರಾಗಿ […]