ಹೆಜ್ಜೇನು ಕಡಿತ: ಮಹಿಳೆ ಸಾವು
ಉಡುಪಿ: ಮಲ್ಪೆ ಬಳಿ ಹಸುವಿಗೆ ಹುಲ್ಲು ತರಲು ಹೋದ ಮಹಿಳೆಗೆ ಹೆಜ್ಜೇನು ಕಡಿದು ಸಾವನ್ನಪ್ಪಿರುವ ಘಟನೆ ಪಡುತೋನ್ಸೆ ಗ್ರಾಮದ ಕೆಮ್ಮಣ್ಣು ಸಮೀಪ ನಡೆದಿದೆ. ಕಟಪಾಡಿಯಲ್ಲಿಯೂ ಹೆಜ್ಜೇನು ದಾಳಿ ಕಟಪಾಡಿ ಏಣಗುಡ್ಡೆ ರಾಜರತ್ನ ರಸ್ತೆಯ ಬಳಿಯೂ ಹಲವು ಮಂದಿಗೆ ಹೆಜ್ಜೇನು ದಾಳಿ ನಡೆಸಿದ್ದು, ಮಹಿಳೆಯೋರ್ವರು ಜಿಲ್ಲಾಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆಗಾಗಿ ದಾಖಲುಗೊಂಡ ಘಟನೆ ನಡೆದಿದೆ. ಈ ರಸ್ತೆಯ ತಿರುವಿನ ಹುಣಸೆ ಮರದಲ್ಲಿ ಹೆಜ್ಜೇನುಗಳು ಬೃಹತ್ ಗಾತ್ರದ ಗೂಡು ಕಟ್ಟಿವೆ. ಗಿಡುಗವೊಂದು ಗೂಡಿಗೆ ದಾಳಿ ನಡೆಸಿದ ಕಾರಣ […]
ತ್ರಿಶಾ ವಿದ್ಯಾ ಕಾಲೇಜಿನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ
ಉಡುಪಿ: ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನದ ನಿಮಿತ್ತ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಅತಿಥಿಗಳಾಗಿ ಭಾಗವಹಿಸಿದ್ದ ಉಪ ಡಿ.ವೈ.ಎಸ್.ಪಿ ವಿಜಯ ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯ ಅತೀ ಮುಖ್ಯ. ಸ್ಪಸ್ಥ ಮನಸ್ಸಿಗಾಗಿ ಜೀವನದಲ್ಲಿ ಒಳ್ಳೆಯ ದಿನಚರಿಯನ್ನು ಅಳವಡಿಸಿಕೊಳ್ಳಬೇಕು ಮತ್ತು ಹಿರಿಯರ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು. ಜೀವನದಲ್ಲಿ ಒಳ್ಳೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಅತೀ ಅವಶ್ಯ ಎಂದರು. ಕಾಪು ಸಬ್ ಇನ್ಸ್ಪೆಕ್ಟರ್ ಶ್ರೀಶೈಲ ಡಿ., ಸಬ್ ಇನ್ಸ್ಪೆಕ್ಟರ್ ಗಳಾದ ಶ್ರೀಮತಿ ಮಮತಾ ಮತ್ತು […]
ಏಣಗುಡ್ಡೆ ವೀರಸ್ತಂಭ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ
ಕಟಪಾಡಿ: ಏಣಗುಡ್ಡೆ ವೀರಸ್ತಂಭ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೆ. 26 ಸೋಮವಾರದಿಂದ ಮೊದಲ್ಗೊಂಡು ಅ.04 ಮಂಗಳವಾರ ಪರ್ಯಂತ ಅಗ್ರಹಾರ ವೀರಸ್ತಂಭ ಶ್ರೀ ದುರ್ಗಾಪರಮೇಶ್ವರಿ ದೇವರ ದಿವ್ಯ ಸನ್ನಿಧಿಯಲ್ಲಿನವರಾತ್ರಿ ಮಹೋತ್ಸವ ನಡೆಯಲಿರುವುದು. ಸೆ. 30 ಶುಕ್ರವಾರದಂದು ಜರಗಲಿರುವ ಚಂಡಿಕಾಯಾಗ ಪೂರ್ಣಾಹುತಿ ಗಂಟೆ 11.00ಕ್ಕೆ ಹಾಗೂ ಮಹಾ ಅನ್ನಸಂತರ್ಪಣೆಯು ಮಧ್ಯಾಹ್ನ ಗಂಟೆ 1.00 ಕ್ಕೆ ಜರಗಲಿರುವುದು. ಈ ಪ್ರಸನ್ನ ಸಮಯದಲ್ಲಿ ತಾವು ಸಮಿತ್ರ ಬಾಂಧವರಾಗಿ ಆಗಮಿಸಿ, ತನು- ಮನ- ಧನಗಳಿಂದ ಸಹಕರಿಸಿ, ಶ್ರೀದೇವಿಯ ಶ್ರೀಮುಡಿ ಗಂಧ- ಪ್ರಸಾದವನ್ನು ಸ್ವೀಕರಿಸಿ, ಕೃತಾರ್ಥರಾಗಬೇಕೆಂದು […]
ಕಟಪಾಡಿ: ಬಸ್ ಅಪಘಾತ; ಸೈಕಲ್ ಚಲಾಯಿಸುತ್ತಿದ ಬಾಲಕನಿಗೆ ಏಟು
ಕಟಪಾಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ವೇಗದೂತ ಬಸ್ ಒಂದು ಸೈಕಲ್ ಚಲಾಯಿಸಿಕೊಂಡು ಬರುತ್ತಿದ್ದ 7 ನೇ ತರಗತಿ ಬಾಲಕನಿಗೆ ಗುದ್ದಿದ್ದು, ಬಾಲಕನ ತಲೆ ಬಸ್ಸಿನ ಮುಂದಿನ ಕಿಟಿಕಿಯ ಗಾಜಿಗೆ ಹೊಡೆದಿದೆ. ಘಟನೆಯಿಂದ ಬಾಲಕನ ತಲೆಗೆ ಪೆಟ್ಟಾಗಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.
ತ್ರಿಶಾ ಕಾಲೇಜಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಗಾರ
ಉಡುಪಿ: ಕ್ಷೇತ್ರ ಶಿಕ್ಷಣ ಇಲಾಖೆ, ಉಡುಪಿ ಇವರ ಸಹಯೋಗದಲ್ಲಿ ತ್ರಿಶಾ ಸಮೂಹ ಸಂಸ್ಥೆಗಳು ಮತ್ತು ಎಸ್.ವಿ.ಎಸ್. ಟ್ರಸ್ಟ್, ಕಟಪಾಡಿ ಇವರ ಆಶ್ರಯದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆಂದು ಅರಿವು ಕಾರ್ಯಗಾರವನ್ನು ಆಗಸ್ಟ್ 26 ರಂದು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಏಕಾಗ್ರತೆ, ಧ್ಯಾನ ಮತ್ತು ಅಧ್ಯಯನವು ಮಕ್ಕಳ ಭವಿತವ್ಯವನ್ನು ಉಜ್ವಲಗೊಳಿಸುತ್ತದೆ ಎಂದು ತಿಳಿಸಿದರು. ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು […]