ಕಾಸರಗೋಡು-ಮಂಗಳೂರು ಮಾರ್ಗದಲ್ಲಿ “ವಂದೇ ಭಾರತ್” ಸೂಚನಾ ಫಲಕಗಳ ಅಳವಡಿಕೆ

ಕಣ್ಣೂರು: ಕೇರಳದಲ್ಲಿ ಓಡಲಿರುವ ಸಂಭವನೀಯ ಎರಡನೇ ವಂದೇ ಭಾರತ್ ರೈಲಿನ ಅಂತಿಮ ಮಾರ್ಗವನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ. ಆದಾಗ್ಯೂ, ಮಂಗಳೂರು-ಕಾಸರಗೋಡು ವಿಭಾಗದ ನಿಲ್ದಾಣಗಳಲ್ಲಿ “ವಂದೇ ಭಾರತ್” ಎಂದು ಸೂಚಿಸುವ ಫಲಕಗಳನ್ನು ಅಳವಡಿಸಲಾಗಿದ್ದು ಇದು ಈ ಭಾಗದಲ್ಲಿ ಇಂಜಿನ್ ಅನ್ನು ನಿಲ್ಲಿಸಲು ಲೋಕೋ ಪೈಲಟ್‌ಗಳಿಗೆ ಸೂಚನೆಯಾಗಿದೆ. ಈ ಅಳವಡಿಕೆಯು ವಂದೇ ಭಾರತ್ ರೈಲು ಕಾಸರಗೋಡು-ಮಂಗಳೂರು ಮಾರ್ಗವನ್ನು ಒಳಗೊಳ್ಳುತ್ತದೆ ಎಂದು ಸೂಚಿಸುತ್ತದೆ. ಈಗಿರುವ ರೈಲು ತಿರುವನಂತಪುರ-ಕಾಸರಗೋಡು ಮಾರ್ಗದಲ್ಲಿ ಸಂಚರಿಸುತ್ತದೆ. ಮಂಗಳೂರು-ತಿರುವನಂತಪುರಂ, ಮಂಗಳೂರು-ಕೊಟ್ಟಾಯಂ, ಮಂಗಳೂರು-ಎರ್ನಾಕುಲಂ, ಮತ್ತು ಮಂಗಳೂರು-ಕೊಯಂಬತ್ತೂರು ಇವು ಕೇರಳದಲ್ಲಿ ಎರಡನೇ […]

ಕಾಸರಗೋಡು: ಸೌಟು ಹಿಡಿಯುವ ಕೈಗಳು ಬಸ್ ಸ್ಟೀರಿಂಗ್ ಕೂಡಾ ಹಿಡಿಯಬಹುದೆಂದು ತೋರಿದ ದಿಟ್ಟ ನಾರಿ ದೀಪಾ!!

ಕಾಸರಗೋಡು: ಶ್ರೀಕೃಷ್ಣ ಬಸ್ಸಿನ ಸ್ಟೀರಿಂಗ್ ಹಿಡಿದು ಯಾವುದೇ ಪುರುಷರಿಗೆ ಕಮ್ಮಿ ಇಲ್ಲದಂತೆ ಬಸ್ ಚಲಾಯಿಸುತ್ತಾರೆ ಆಡುಕಾತುವಾಯಲ್ ಮೂಲದ ಎನ್ ದೀಪಾ ಎಂಬ ದಿಟ್ಟ ನಾರಿ. ಮಹಿಳೆಯರು ಭಾರೀ ವಾಹನಗಳನ್ನು ಚಲಾಯಿಸಲು ಸಾಧ್ಯವಿಲ್ಲ ಎನ್ನುವ ಪೂರ್ವಾಗ್ರಹವನ್ನು ತೊಡೆದು ಹಾಕಿದ್ದಾರೆ 36 ವರ್ಷ ವಯಸ್ಸಿನ ದೀಪಾ. ಏರುತಗ್ಗಿನ ಗುಡ್ಡಗಾಡಿನ ವಕ್ರ ರಸ್ತೆಗಳಲ್ಲಿ ಪ್ರಯಾಣಿಕರಿಂದ ತುಂಬಿದ ಬಸ್ ಅನ್ನು ಸಲೀಸಾಗಿ ಓಡಿಸುವ ದೀಪಾ ತನ್ನ ಬಹುಕಾಲದ ಕನಸನ್ನು ನನಸಾಗಿಸಿದ್ದಾರೆ. ಇವರ ಕನಸಿಗೆ ಇಂಬು ನೀಡಿದವರು ಬಸ್ ಮಾಲಕ ನಿಶಾಂತ್. ಅನುಭವಿ ಮತ್ತು […]

ಕಾಸರಗೋಡು: ಬದಿಯಡ್ಕದಲ್ಲಿ ಗ್ರಾಮಲೋಕ ಕೊಂಕಣಿ ಸಾಹಿತ್ಯ ಕಾರ್ಯಕ್ರಮ

ಕಾಸರಗೋಡು: ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಗ್ರಾಮಲೋಕ ಎಂಬ ಕೊಂಕಣಿ ಸಾಹಿತ್ಯ ಕಾರ್ಯಕ್ರಮ ಜು. 21 ರಂದು ನಡೆಯಿತು. ಕೊಂಕಣಿ ಸಾಹಿತಿ, ಭಾಷಾ ತಜ್ಞ ಡಾ. ಕಸ್ತೂರಿ ಮೋಹನ್ ಪೈ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ವಿಭಾಗದ ಸಂಯೋಜಕ ಮೆಲ್ವಿನ್ ರೊಡ್ರಿಗಸ್ ಗ್ರಾಮಲೋಕ ಕಾರ್ಯಕ್ರಮದ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಸಭಿಕರಿಗೆ ನೀಡಿದರು. ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಡಿ ಶಂಕರ ಗ್ರಾಮಲೋಕ ಕಾರ್ಯಕ್ರಮಕ್ಕಾಗಿ ಬದಿಯಡ್ಕ ಎಂಬ ಸಣ್ಣ ಗ್ರಾಮವನ್ನು ಆಯ್ಕೆ […]

ಕಾಸರಗೋಡು: ಬೇಳದಲ್ಲಿ ಕವಿತಾ ಟ್ರಸ್ಟ್ ವತಿಯಿಂದ 17ನೇ ಕವಿತಾ ಫೆಸ್ತ್ ಆಯೋಜನೆ

ಕಾಸರಗೋಡು: ಕವಿತಾ ಟ್ರಸ್ಟ್ ವತಿಯಿಂದ ವರ್ಷಂಪ್ರತಿ ನಡೆಯುವ ‘ಕವಿತಾ ಫೆಸ್ತ್’ ಈ ಬಾರಿ ಕಾಸರಗೋಡು ಜಿಲ್ಲೆಯ ಬೇಳದಲ್ಲಿ ಜನವರಿ 8 ಭಾನುವಾರದಂದು ಅದ್ದೂರಿಯಾಗಿ ನಡೆಯಿತು. ದಿನಪೂರ್ತಿ ನಡೆದ ಕಾರ್ಯಕ್ರಮನ್ನು ಕೊಂಕಣಿ ಬರಹಗಾರ ಹಾಗೂ ಪತ್ರಕರ್ತ ಆಸ್ಟಿನ್ ಡಿ ಸೋಜಾ ಪ್ರಭು ಉದ್ಘಾಟಿಸಿದರು. ಯುವ ಬರಹಗಾರರಾದ ಸ್ಟ್ಯಾನಿ ಬೇಳ ಹಾಗೂ ಕೆಬಿಎಂ, ಗೋವಾ ಇದರ ಅಧ್ಯಕ್ಷ ಅನ್ವೇಶ ಸಿಂಗ್ಭಾಳ್ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಭಾಗವಾಗಿ ನೆಲ್ಸನ್ ಹಾಗೂ ಲವೀನಾ ರೋಡ್ರಿಕ್ಸ್ ಪ್ರಾಯೋಜಕತ್ವದ ಚಾಫ್ರಾ ದೆಕೋಸ್ತಾ ಸ್ಮಾರಕ ಅಖಿಲ […]

ಮಂಗಳೂರು ವಿಮಾನ ನಿಲ್ದಾಣದಲ್ಲಿ ಎಂ.ಎಸ್ ಧೋನಿ: ಕಾಸರಗೋಡಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿ

ಮಂಗಳೂರು: ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕ, ಕ್ಯಾಪ್ಟಲ್ ಕೂಲ್ ಎಂ.ಎಸ್ ಧೋನಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಕರ್ನಾಟಕದ ಗಡಿ ಜಿಲ್ಲೆಯಾದ ಕಾಸರಗೋಡಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದಕ್ಕೆ ತೆರಳುವ ಸಂದರ್ಭ ಮುಂಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಆ ಬಳಿಕ ಶಾಸಕ ಖಾದರ್ ಅವರ ಸಹೋದರ ಯು.ಟಿ ಇಫ್ತಿಕಾರ್ ಅವರ ಕಾರಿನಲ್ಲಿ ಕಾಸರಗೋಡಿನ ಬೇಕಲ್ ಗೆ ತೆರಳಿದ್ದಾರೆ. ಕಾಸರಗೋಡಿನಲ್ಲಿ ನಡೆಯಲಿರುವ ತಮ್ಮ ಸ್ನೇಹಿತ ಡಾ. ಶಾಜಿರ್ ಗಫಾರ್ ಅವರ ತಂದೆ ಪ್ರೊ.ಅಬ್ದುಲ್ ಗಫಾರ್ ಅವರ […]