ಅಕ್ರಮ ಆಸ್ತಿ ಗಳಿಕೆ: ಕೆಎಎಸ್ ಅಧಿಕಾರಿ ಡಾ. ಬಿ. ಸುಧಾ ಮನೆ, ಕಚೇರಿ ಸಹಿತ ಆರು ಕಡೆ ಎಸಿಬಿ ದಾಳಿ

ಬೆಂಗಳೂರು: ಕೆಎಎಸ್ ಅಧಿಕಾರಿ ಡಾ. ಬಿ. ಸುಧಾ ಅವರ ಬೆಂಗಳೂರಿನ ಮನೆ ಸೇರಿದಂತೆ ಒಟ್ಟು ಆರು ಕಡೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಮತ್ತು ಅವ್ಯವಹಾರ ಸಂಬಂಧ ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ಎಸಿಬಿ ಅಧಿಕಾರಿಗಳು ಇಂದು ಬೆಳಿಗ್ಗೆ ಬೆಂಗಳೂರು ಮತ್ತು ಉಡುಪಿಯ ಹೆಬ್ರಿ ಸೇರಿದಂತೆ ಒಟ್ಟು ಆರು ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರು ಕೊಡಿಗೇನಹಳ್ಳಿಯಲ್ಲಿರುವ ನಿವಾಸ, ಸುಧಾ ಅವರಿಗೆ ಸಂಬಂಧಪಟ್ಟ ಯಲಹಂ ಫ್ಲಾಟ್, ಬ್ಯಾಟರಾಯನಪುರದ ಪರಿಚಿತರ […]