ಹೀರೋ ಶಕ್ತಿ ಮೋಟರ್ಸ್ ನ ಕರಾವಳಿ ಕರ್ನಾಟಕದ ಪ್ರಥಮ ಅಧಿಕೃತ ಮತ್ತು ಸಂಪೂರ್ಣ ಡಿಜಿಟಲೀಕೃತ ಶೋರೂಂ ಉದ್ಘಾಟನೆ
ಉಡುಪಿ: ಭಾರತದ 5ನೇ ಮತ್ತು ಕರಾವಳಿ ಕರ್ನಾಟಕದ ಪ್ರಥಮ ಹೀರೋ ಶಕ್ತಿ ಮೋಟರ್ ನ ಅಧಿಕೃತ ಶೋರೂಂ ಭಾನುವಾರದಂದು ಕರಾವಳಿ ಜಂಕ್ಷನ್ ಬಳಿಯಿರುವ ಶ್ರೀ ರಾಮದರ್ಶನ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು. ಶಾಸಕ ರಘುಪತಿ ಭಟ್ ಶೋರೂಂ ಅನ್ನು ಉದ್ಘಾಟಿಸಿ ಮಾತನಾಡಿ, ಉಡುಪಿ ಬೆಳೆಯುತ್ತಿರುವ ನಗರ. ಇಂತಹ ಬೆಳೆಯುತ್ತಿರುವ ನಗರದ ಹೃದಯ ಭಾಗದಲ್ಲಿ ಹೀರೋ ಸಂಸ್ಥೆಯವರು ತಮ್ಮ ವಿಶೇಷ ಶೋರೂಂ ಅನ್ನು ಸ್ಥಾಪಿಸಿರುವುದು ನಗರಕ್ಕೆ ಇನ್ನೂ ಹೆಚ್ಚಿನ ಶೋಭೆ ತಂದಿದೆ. ಉಡುಪಿ ಜನತೆಯ ಮೇಲೆ ವಿಶ್ವಾಸವಿರಿಸಿದ್ದಕ್ಕೆ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುತ್ತೇನೆ […]