ಸೌತ್ ವುಡ್ ಸಿನಿಮಾಗಳ ಅಬ್ಬರಕ್ಕೆ ಬೆಚ್ಚಿದ ಬಾಲಿವುಡ್! ಬಾಯ್ ಕಾಟ್ ಬಾಲಿವುಡ್ ಟ್ರೆಂಡ್ ಗಳಿಂದ ಘಟಾನುಘಟಿ ನಟರ ಚಿತ್ರ ಮೂಲೆಗುಂಪು; ಕೋಟ್ಯಂತರ ರೂ ನಷ್ಟ!

ಮುಂಬೈ: ಅದೊಂದು ಕಾಲವಿತ್ತು, ಸಿನಿಮಾ ರಂಗ ಎಂದರೆ ಹಿಂದಿ ಭಾಷೆಗಳ ಚಿತ್ರ ನಿರ್ಮಾಣ ಮಾಡುವ ಬಾಲಿವುಡ್ ಮಾತ್ರ ಎನ್ನಲಾಗುತ್ತಿತ್ತು. ಬಾಲಿವುಡ್ ಎಂದರೆ ಬಾಯಿ ಬಾಯಿ ಬಿಡುತ್ತಿದ್ದ ಕಾಲವದು. ಬಾಲಿವುಡ್ಡಿನ ಏಕಚಕ್ರಾಧಿಪತ್ಯದಡಿ ಭಾರತೀಯ ಸಿನಿರಂಗದ ಅದೆಷ್ಟೋ ಭಾಷೆಗಳ ಉತ್ತಮ ಚಿತ್ರಗಳೂ ಮಸುಕಾಗಿರುತ್ತಿದ್ದವು. ಆದರೆ ಈಗ ಎಲ್ಲವೂ ತಲೆಕೆಳಗು. ಟಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್, ಒಟ್ಟಾರೆಯಾಗಿ ಹೇಳುವುದಾದರೆ ಅಖಂಡ ದಕ್ಷಿಣ ಭಾರತದ ‘ಸೌತ್ ವುಡ್’ ಸಿನಿಮಾಗಳ ಅಬ್ಬರಕ್ಕೆ ಭಾರತೀಯ ಸಿನಿಮಾರಂಗದ ‘ಬಾದಶಹಾ’ ಎಂದು ಮೆರೆಯುತ್ತಿದ್ದ ಬಾಲಿವುಡ್ ಬೆಚ್ಚಿಬಿದ್ದಿದೆ. ಒಂದೆಡೆ ಪ್ರಖರ […]