ಕರ್ತವ್ಯಪಥದಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ ವಸುಪ್ರದಾ ಇವರಿಗೆ ಅಭಿನಂದನೆ
ಉಡುಪಿ : ರಂಗಭೂಮಿ ಉಡುಪಿ ಇದರ ರಂಗಭೂಮಿ ರಂಗೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ, ನವದೆಹಲಿಯ ಕರ್ತವ್ಯಪಥದಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ತಂಡದೊಂದಿಗೆ ಭಾಗವಹಿಸಿ ಭರತನಾಟ್ಯ ಪ್ರದರ್ಶನವನ್ನು ನೀಡಿ ಮೆಚ್ಚುಗೆಗಳಿಸಿದ ವಸುಪ್ರದಾ ಇವರನ್ನು ಉಡುಪಿ ಸಮಸ್ತ ನಾಗರಿಕ ಪರವಾಗಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ರಘುಪತಿ ಭಟ್, ನಾಡೋಜ ಜಿ.ಶಂಕರ್, ಎಚ್.ಎಸ್.ಬಲ್ಲಾಳ್,ತ ಲ್ಲೂರು ಶಿವರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಹಲವು ಪ್ರಥಮಗಳಿಗೆ ಸಾಕ್ಷಿಯಾದ ಕರ್ತವ್ಯಪಥದ ಗಣರಾಜ್ಯೋತ್ಸವದ ಪಥಸಂಚಲನ
ನವದೆಹಲಿ: ಗುರುವಾರದಂದು ದೇಶವು 74 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದು ಈ ಸಂದರ್ಭದಲ್ಲಿ ಹಲವಾರು ‘ಪ್ರಥಮ’ಗಳಿಗೆ ಸಾಕ್ಷಿಯಾಗಿದೆ. ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ನಾಗರಿಕರು ಇದೇ ‘ಮೊದಲ’ ಬಾರಿಗೆ ಹಲವು ವಿಷಯಗಳನ್ನು ನೋಡಿದ್ದಾರೆ. ಇದೇ ಮೊದಲ ಬಾರಿಗೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ್ದಾರೆ. ಭಾರತದ ಎರಡನೇ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ರಾಷ್ಟ್ರಧ್ವಜವನ್ನು ಬಿಚ್ಚಿ, ಮೆರವಣಿಗೆ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದ್ದಾರೆ. ಕಳೆದ ವರ್ಷ ಕರ್ತವ್ಯ ಪಥ್ ಎಂದು ಮರುನಾಮಕರಣಗೊಂಡ ರಾಜಪಥದಲ್ಲಿ ಮೊದಲ ಬಾರಿಗೆ ಭಾರತ […]
ಇದು ಬ್ರಿಟಿಷರ ಕಾಲದ ರಾಜಪಥ ಅಲ್ಲ: ಇನ್ನು ಮುಂದೆ ಇದು ಆತ್ಮನಿರ್ಭರ ಭಾರತದ ಕರ್ತವ್ಯ ಪಥ
ನವದೆಹಲಿ: ಬ್ರಿಟಿಷರ ಕಾಲದ ಗುಲಾಮಗಿರಿಯ ಎಲ್ಲಾ ಸಂಕೇತಗಳನ್ನು ನಿರ್ಮೂಲನೆ ಮಾಡುವ ಪಣ ತೊಟ್ಟಿರುವ ಪ್ರಧಾನಿ ಮೋದಿ, ಐ.ಎನ್. ಎಸ್ ವಿಕ್ರಾಂತ್ ನಲ್ಲಿರುವ ಬ್ರಿಟಿಷರ ಕಾಲದ ನೌಕಾ ಧ್ವಜವನ್ನು ಬದಿಗೊತ್ತಿ ಛತ್ರಪತಿ ಶಿವಾಜಿ ಮಹಾರಾಜರ ನೌಕಾ ಧ್ವಜದಿಂದ ಪ್ರೇರಿತ ಧ್ವಜವನ್ನು ಅನಾವರಣಗೊಳಿಸಿದ ಬೆನ್ನೆಲ್ಲೇ, ದೆಹಲಿಯ ರಾಜಪಥದ ಹೆಸರನ್ನು ಬದಲಿಸಿ ಇನ್ನು ಮುಂದೆ ಅದನ್ನು ‘ಕರ್ತವ್ಯ ಪಥ’ವೆಂದು ಘೋಷಿಸಲು ಬೇಕಾದ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗೆ ಸೆಂಟ್ರಲ್ ವಿಸ್ಟಾದ ಕರ್ತವ್ಯ […]