ಕರ್ನಾಟಕ ಸಂಘ ಮಾಟುಂಗ ಮುಂಬೈ 90ರ ಸಂಭ್ರಮ: ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಆಯೋಜನೆ

ಮುಲುಂಡ್: ಕರ್ನಾಟಕ ಸಂಘ ಮಾಟುಂಗ ಮುಂಬೈ ಹಾಗೂ ಕನ್ನಡ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಿಂದ ಏಪ್ರಿಲ್ 8 ರಂದು ಸಂಸ್ಕೃತಿ ಸಂಭ್ರಮ ಉತ್ಸವ ಮುಲುಂಡ್ (ಪ)ನ ಮಹಾಕವಿ ಕಾಳಿದಾಸ ಸಭಾಗೃಹದಲ್ಲಿ ವೈವಿಧ್ಯಪೂರ್ಣ ಸಾಂಸ್ಕೃತಿಕ ನೃತ್ಯ ವೈಭವ ಕಾರ್ಯಕ್ರಮದೊಂದಿಗೆ ಯಶಸ್ವಿಯಾಗಿ ಜರುಗಿತು. ಸಂಜೆ ಜರುಗಿದ ಸಮಾರೋಪ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಮನೋಹರ ಎಂ ಕೋರಿ ಮಾತನಾಡಿ, ಕರ್ನಾಟಕ ಸಂಘ ಕಳೆದ 9 ದಶಕಗಳಲ್ಲಿ ಮಹಾನಗರದಲ್ಲಿ ಕನ್ನಡ ಭಾಷೆ ಸಂಸ್ಕೃತಿಯನ್ನು ಸದಾ ಜೀವಂತವಾಗಿ ಉಳಿಸುವಲ್ಲಿ ಸಾಂಸ್ಕೃತಿಕ ವೇದಿಕೆಯಾಗಿ ಕರ್ನಾಟಕ […]