ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ 26 ದಿನದ ಹಸುಗೂಸಿನ ಚಿಕಿತ್ಸೆಗಾಗಿ ಸಹಾಯಧನ ಹಸ್ತಾಂತರ

ಕೋಟೇಶ್ವರ: ಇಲ್ಲಿನ ಗೀತಾ ಶ್ರೀಧರ್ ದಂಪತಿಗಳ ಮಗನಾದ 26 ದಿನದ ಮಗು ಆರ್ಯನ್ ಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆದಿದ್ದು, ಕರ್ನಾಟಕ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲಾ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರುಗಳೆಲ್ಲರೂ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ತೆರಳಿ, ತೀವ್ರ ನಿಗಾ ಘಟಕದಲ್ಲಿ ಶಸ್ತ್ರ ಚಿಕಿತ್ಸೆಗೊಳಗಾಗಿರುವ ಮಗು ಶೀಘ್ರ ಗುಣಮುಖವಾಗಲು ದೇವರಲ್ಲಿ ಪ್ರಾರ್ಥಿಸಿ, ಹೆತ್ತವರನ್ನು ಸಂತೈಸಿ, ಚಂದಾ ಎತ್ತಿ ಸಂಗ್ರಹಿಸಿದ ಹಣ ಒಟ್ಟು 90959 ರೂ. ಗಳನ್ನು ಮಗುವಿನ ತಾಯಿಗೆ ಹಸ್ತಾಂತರ ಮಾಡಿದರು. […]