ಜ. 23 ರಂದು ಪಿಎಸ್‌ಐ ಮರು ಪರೀಕ್ಷೆ ನಿಗದಿ: ಅಭ್ಯರ್ಥಿಗಳಿಗಾಗಿ ಸೂಚನೆ ಪ್ರಕಟಿಸಿದ ಪರೀಕ್ಷಾ ಪ್ರಾಧಿಕಾರ
ಬೆಂಗಳೂರು: ನೇಮಕಾತಿ ಹಗರಣದಿಂದಾಗಿ ರದ್ದಾಗಿದ್ದ ಕರ್ನಾಟಕ ಪೊಲೀಸ್ ಇಲಾಖೆಯ ಸಿವಿಲ್ ಸಬ್ ಇನ್ಸ್‌ಪೆಕ್ಟರ್ (PSI) ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜನವರಿ 23ರಂದು ಪರೀಕ್ಷೆ ನಿಗದಿ ಪಡಿಸಿದೆ. ಈ ಹಿಂದೆ ಪರೀಕ್ಷೆ ನಡೆಸಿದ್ದು ನೇಮಕಾತಿಯಲ್ಲಿ ಹಗರಣ ನಡೆದ ಕಾರಣ ರದ್ದುಪಡಿಸಲಾಗಿತ್ತು. ಈಗ ಹೊಸ ದಿನಾಂಕವನ್ನು ನಿಗದಿಪಡಿಸಿ ಪಿಎಸ್‌ಐ ಮರು ಪರೀಕ್ಷೆಗೆ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಪರೀಕ್ಷೆ ಸಂದರ್ಭ ಹಲವಾರು ಸೂಚನೆಗಳನ್ನು ನೀಡಲಾಗಿದ್ದು ಇದನ್ನು ಕಡ್ಡಾಯವಾಗಿ ಪಾಲಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ರಮ್ಯಾ ತಿಳಿಸಿದ್ಧಾರೆ. […]