5,8,9ನೇ ತರಗತಿಗಳ ಬೋರ್ಡ್ ಪರೀಕ್ಷೆ ರದ್ದು: ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿನ 5,8,9ನೇ ತರಗತಿಗಳ ಬೋರ್ಡ್ ಪರೀಕ್ಷೆಯನ್ನು (Board Exam) ರದ್ದು ಮಾಡಿ ಹೈಕೋರ್ಟ್​ (High Court) ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ 5,8,9ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಿಗದಿಪಡಿಸಿತ್ತು. ಸರ್ಕಾರದ ಸುತ್ತೋಲೆಯನ್ನು ಪ್ರಶ್ನಿಸಿ ರೂಪ್ಸಾ ಅನುದಾನಿತ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಪೀಠ 5,8,9ನೇ ತರಗತಿಗಳ ಬೋರ್ಡ್ ಪರೀಕ್ಷೆಯನ್ನು […]

ಗಂಡ ಕಪ್ಪೆಂದು ಅವಮಾನಿಸಿ ಪ್ರತ್ಯೇಕವಾಗಿ ವಾಸಿಸಿ ಸುಳ್ಳು ಆರೋಪ ಹೊರಿಸಿದ ಪತ್ನಿ: ಕ್ರೌರ್ಯದ ಹಿನ್ನೆಲೆಯಲ್ಲಿ ವಿವಾಹ ವಿಸರ್ಜಿಸಿದ ಕರ್ನಾಟಕ ಹೈಕೋರ್ಟ್

ಬೆಂಗಳೂರು: ಪತಿಯ ಮೈ ಬಣ್ಣವನ್ನು ‘ಕಪ್ಪು’ ಎಂದು ಅವಮಾನಿಸಿ ಪತ್ನಿ ಅದೇ ಕಾರಣಕ್ಕೆ ಆತನಿಂದ ದೂರವಿರುವುದು ಮತ್ತು ವಿಷಯವನ್ನು ಮುಚ್ಚಿಡಲು ಅಕ್ರಮ ಸಂಬಂಧಗಳ ಸುಳ್ಳು ಆರೋಪಗಳನ್ನು ಪತಿಯ ಮೇಲೆ ಹೊರಿಸುವುದು ಕ್ರೌರ್ಯದ ಪರಿಧಿಯಲ್ಲಿ ಬರುವುದು ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ವಿಭಾಗೀಯ ಪೀಠವು ಅಂಗೀಕರಿಸಿತು ಮತ್ತು ವಿಚ್ಛೇದನದ ತೀರ್ಪು ನಿರಾಕರಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿತು. “ಗಂಡ ಕಪ್ಪಾಗಿದ್ದಾನೆ ಎಂಬ ಕಾರಣಕ್ಕಾಗಿ […]

ವಿಚ್ಛೇದಿತ ಗಂಡನಿಂದ ಸಂಪೂರ್ಣ ಜೀವನಾಂಶವನ್ನು ಬಯಸುತ್ತಾ ಹೆಂಡತಿಯು ಉದ್ಯೋಗವಿಲ್ಲದೆ ಸುಮ್ಮನೆ ಕೂರುವಂತಿಲ್ಲ: ಕರ್ನಾಟಕ ಹೈಕೋರ್ಟ್

ಬೆಂಗಳೂರು: ಈ ಹಿಂದೆ ಉದ್ಯೋಗದಲ್ಲಿದ್ದ ಪತ್ನಿಯು ತನ್ನ ಪತಿಯಿಂದ ಸಂಪೂರ್ಣ ಜೀವನಾಂಶವನ್ನು ಪಡೆಯಲು ಸುಮ್ಮನೆ ಕೂರುವಂತಿಲ್ಲ ಆದರೆ ಆಕೆಯ ಜೀವನೋಪಾಯವನ್ನು ಪೂರೈಸಲು ಕೆಲವು ಪ್ರಯತ್ನಗಳನ್ನು ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಹೇಳಿದೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆಕೆಗೆ ಮಂಜೂರು ಮಾಡಿರುವ ಜೀವನಾಂಶ ಮತ್ತು ಪರಿಹಾರ ಮೊತ್ತದಲ್ಲಿನ ಕಡಿತವನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಮಹಿಳೆಗೆ ನೀಡಲಾಗಿದ್ದ ಜೀವನಾಂಶವನ್ನು10,000 ರೂಗಳಿಂದ 5,000 ಕ್ಕೆ ಮತ್ತು ಪರಿಹಾರವನ್ನು 3,00,000 ರೂ ಗಳಿಂದ 2,00,000 ಕ್ಕೆ ಇಳಿಸಿದ ಸೆಷನ್ಸ್ […]

ಕೆಜಿಎಫ್ ಹಾಡು ಹಕ್ಕುಸ್ವಾಮ್ಯ ಚ್ಯುತಿ ಆರೋಪ: ಕಾಂಗ್ರೆಸ್ ನಾಯಕರ ಮೇಲಿನ ಎಫ್ಐಆರ್ ವಜಾಗೊಳಿಸಲು ಕರ್ನಾಟಕ ಹೈಕೋರ್ಟ್ ನಕಾರ

ಬೆಂಗಳೂರು: ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕನ್ನಡ ಚಲನಚಿತ್ರ ಕೆಜಿಎಫ್ ಅಧ್ಯಾಯ 2 ರ ಸಂಗೀತದ “ಅನಧಿಕೃತ” ಬಳಕೆ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಸುಪ್ರಿಯಾ ಶ್ರೀನಟೆ ವಿರುದ್ಧದ ಎಫ್ಐಆರ್ ಅನ್ನು ವಜಾಗೊಳಿಸಲು ಕರ್ನಾಟಕ ಹೈಕೋರ್ಟ್ ಬುಧವಾರ ನಿರಾಕರಿಸಿದೆ. ನವೆಂಬರ್ 2022 ರಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕನ್ನಡ ಚಲನಚಿತ್ರ ಕೆಜಿಎಫ್ ಅಧ್ಯಾಯ 2 ರ ಸಂಗೀತವನ್ನು ಅನಧಿಕೃತವಾಗಿ ಬಳಸಲಾಗಿದೆ ಎಂದು ಎಂ.ಆರ್.ಟಿ ಸಂಗೀತ ಕಂಪನಿ ನೀಡಿದ ದೂರಿನ […]

ಶಾಸಕ ಹರೀಶ್ ಪೂಂಜಾ ವಿರುದ್ದ ಪ್ರಕರಣಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದ ಹೈಕೋರ್ಟ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪ ಸಂಬಂಧ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ತಮ್ಮ ವಿರುದ್ಧದ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಬಿಜೆಪಿ ಶಾಸಕ ಹರೀಶ್​ ಪೂಂಜಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠವು ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ […]