ಮತ ಎಣಿಕೆ ಹಿನ್ನೆಲೆ: ನಾಳೆ ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿ
ಉಡುಪಿ: ಮೇ 13 ರಂದು ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ – 2023 ರ ಮತ ಎಣಿಕೆ ಕಾರ್ಯವು ಬ್ರಹ್ಮಗಿರಿಯ ಸೈಂಟ್ ಸಿಸಿಲಿ ವಿದ್ಯಾಸಂಸ್ಥೆಯಲ್ಲಿ ನಡೆಯಲಿರುವ ಸಂಬಂಧ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಮೇ 13 ರ ಬೆಳಿಗ್ಗೆ 06.00 ಗಂಟೆಯಿಂದ ಮಧ್ಯರಾತ್ರಿ 12.00 ಗಂಟೆಯವರೆಗೆ ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಆದೇಶ ಹೊರಡಿಸಿದ್ದಾರೆ.
ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗಿಯಾದ ತೃತೀಯ ಲಿಂಗಿಗಳು
ಬೆಂಗಳೂರು: ದಾವಣಗೆರೆ ಉತ್ತರ ಹಾಗೂ ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ತೃತೀಯ ಲಿಂಗಿಗಳು ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗವಹಿಸಿ ಮತ ಚಲಾಯಿಸಿ ಹರ್ಷ ವ್ಯಕ್ತ ಪಡಿಸಿದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸುಕ್ರಿ ಗೌಡ ಹಾಗೂ ಜಾನಪದ ಕಲಾವಿದೆ, ಚುನಾವಣಾ ರಾಯಭಾರಿಯಾದ ಮಂಜಮ್ಮ ಜೋಗತಿ ಮತ ಚಲಾಯಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಚೇತನ ಸ್ನೇಹಿ ಮತದಾನ ಕೇಂದ್ರ 152 ಹಾಗೂ ಕುಡುಪುವಿನ ಎಸ್.ಡಿ.ಎಂ ಮಂಗಲಜ್ಯೋತಿ ಶಾಲೆ ಮತಗಟ್ಟೆ ನಂಬರ್ 144/20 ರಲ್ಲಿ ವಿಶೇಷ ಚೇತನರಿಂದ ಮತದಾನ ಕಾರ್ಯ ನಡೆಯಿತು. […]
ಕರ್ನಾಟಕ ವಿಧಾನಸಭಾ ಚುನಾವಣೆ: 72.67% ಮತದಾನ; ಅತಂತ್ರ ಸರಕಾರದ ಮುನ್ಸೂಚನೆ ನೀಡಿದ ಎಕ್ಸಿಟ್ ಪೋಲ್ ಗಳು
ಬೆಂಗಳೂರು: ಬುಧವಾರ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸರಿಸುಮಾರು 72.67% ಮತದಾನವಾಗಿದೆ. 2018 ರ ಚುನಾವಣೆಯಲ್ಲಿ 72.44% ಮತ್ತು 2013 ರಲ್ಲಿ 71.83% ಮತದಾನವಾಗಿತ್ತು. ದ.ಕ ಜಿಲ್ಲೆಯಲ್ಲಿ 76.15% ಮತದಾನವಾಗಿದ್ದರೆ, ಉಡುಪಿಯಲ್ಲಿ 78.46% ಮತದಾನವಾಗಿದೆ. ಚಿಕ್ಕಬಳ್ಳಾಪುರದಲ್ಲಿ ಸರ್ವಾಧಿಕ 85.83% ಮತದಾನವಾಗಿದ್ದರೆ, ಬಿ.ಬಿ.ಎಂ.ಪಿ(ದಕ್ಷಿಣ) ದಲ್ಲಿ 52.80% ಮತದಾನ ನಡೆದಿದೆ. ಮೂರು ಪ್ರಮುಖ ಎಕ್ಸಿಟ್ ಪೋಲ್ ಏಜೆನ್ಸಿಗಳು ಸೂಚಿಸಿದಂತೆ ಕರ್ನಾಟಕವು ಅತಂತ್ರ ಫಲಿತಾಂಶವನ್ನು ಸೂಚಿಸುತ್ತಿದೆ. ಬಹುತೇಕ ಎಕ್ಸಿಟ್ ಪೋಲ್ ಗಳು ಕಾಂಗ್ರೆಸ್ ಗೆ ಬಹುಮತವನ್ನು ಸೂಚಿಸುತ್ತಿದ್ದರೆ ಮತ್ತೆ ಕೆಲವು ಪೋಲ್ […]
ಕುಟುಂಬ ಸಮೇತರಾಗಿ ಮತ ಚಲಾಯಿಸಿದ ಕೆ. ರಘುಪತಿ ಭಟ್
ಉಡುಪಿ: ಬಿಜೆಪಿ ನಾಯಕ ಕೆ. ರಘುಪತಿ ಭಟ್ ಅವರು ತಮ್ಮ ತಾಯಿ ಸರಸ್ವತಿ ಬಾರಿತ್ತಾಯ, ಧರ್ಮಪತ್ನಿ ಶಿಲ್ಪಾ ಆರ್ ಭಟ್ ಮತ್ತು ಸಹೋದರನ ಧರ್ಮಪತ್ನಿ ಜಯಶ್ರೀ ಅವರೊಂದಿಗೆ ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಉಡುಪಿ: ಯಶ್ ಪಾಲ್ ಸುವರ್ಣ ಅವರಿಂದ ಮತ ಚಲಾವಣೆ
ಉಡುಪಿ: ಇಲ್ಲಿನ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಅವರು ತಮ್ಮ ಮತ ಕ್ಷೇತ್ರವಾದ ಉಡುಪಿ ನಗರದ ಅಜ್ಜರಕಾಡು ವಾರ್ಡಿನಲ್ಲಿರುವ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ಬೂತ್ ನಂ 188 ರಲ್ಲಿ ಮತದಾನ ಮಾಡಿದರು.