ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಲೆಫ್ಟಿನೆಂಟ್ ಕರ್ನಲ್ ಕಾರ್ಕಳದ ಅಳಿಯ: ಸಾಲ್ಮರ ಮಿನೇಜಸ್ ಮನೆಯಲ್ಲಿ ನೀರವ ಮೌನ
ಉಡುಪಿ: ಬುಧವಾರ ತಮಿಳುನಾಡಿನಲ್ಲಿ ಸಂಭವಿಸಿದ ಭಾರತೀಯ ವಾಯುಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಕಾರ್ಕಳದ ಅಳಿಯ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಕೂಡ ಮೃತರಾಗಿದ್ದಾರೆ. ಈ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಸೇರಿ 13 ಮಂದಿ ಸಾವನ್ನಪ್ಪಿದ್ದಾರೆ. ದಿವಂಗತ ಹರ್ಜಿಂದರ್ ಸಿಂಗ್ ಕಾರ್ಕಳ ಸಾಲ್ಮರದ ಪ್ರಫುಲ್ಲ ಎಂಬುವರನ್ನು ಮದುವೆ ಆಗಿದ್ದರು. ಪ್ರಫುಲ್ಲಾ ಕೂಡ ಸೇನೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಹರ್ಜಿಂದರ್ ಅವರು ಪ್ರಫುಲ್ಲಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಸಿಂಗ್ ಅವರ ನಿಧನದ ಸುದ್ದಿ ಮಿನೇಜಸ್ ಕುಟುಂಬಕ್ಕೆ ಶಾಕ್ ನೀಡಿದೆ. ಕಾರ್ಕಳ ಸಾಲ್ಮರದ […]