ನೀಟ್: ಕಾರ್ಕಳದ ಜ್ಞಾನಸುಧಾ ಕಾಲೇಜು ಸಾಧನೆ
ಕಾರ್ಕಳ: ಎಂಬಿಬಿಎಸ್ ಹಾಗೂ ವೈದ್ಯಕೀಯ ಕೋರ್ಸ್ ಗಳ ಪ್ರವೇಶ ಪರೀಕ್ಷೆಯಾದ ರಾಷ್ಟ್ರ ಮಟ್ಟದ ನೀಟ್‌ನಲ್ಲಿ ಕಾರ್ಕಳ ಜ್ಞಾನಸುಧಾ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. ಒಟ್ಟು720 ಅಂಕಗಳಲ್ಲಿ ಇಬ್ಬರು ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕವನ್ನು, 19 ವಿದ್ಯಾರ್ಥಿಗಳು 500ರಿಂದ 600ರ ನಡುವಿನ ಅಂಕಗಳನ್ನು, 23 ವಿದ್ಯಾರ್ಥಿಗಳು 400ರಿಂದ 500ರ ನಡುವಿನ ಅಂಕಗಳನ್ನು ಗಳಿಸಿದ್ದಾರೆ. ನವೀನ್ ಎಂ. ಪಾಟೀಲ್ – 617 ಅಂಕ, ಎಂ.ಎಸ್. ಸುಮುಖ ಮಂಜ – 600 ಅಂಕ ಗಳಿಸಿದ್ದಾರೆ.
ಅಂಗನವಾಡಿ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆಗೆ ಮನವಿ
ಉಡುಪಿ, ಜೂನ್ 1: ಕಾರ್ಕಳ ತಾಲೂಕು ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯ ನೀರೆ, ಕುಕ್ಕುಜೆ, ದೋಣಿಪಲ್ಕೆ, ಕೋಡಂಗೈ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹಾಗೂ ನಿಟ್ಟೆ ಪರಪ್ಪಾಡಿ, ಬೆಳ್ಮಣ್ ಪುನಾರ್, ರಾಗಿಹಕ್ಲು, ಪತ್ತೊಂಜಿಕಟ್ಟೆ, ಬಿ.ಇ.ಎಂ ಶಾಲೆ ಅಂಗನವಾಡಿ ಕೇಂದ್ರದ ಸಹಾಯಕಿಯರನ್ನು ಗುರುತಿಸಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಈ ಆಯ್ಕೆ ಪಟ್ಟಿಯ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಜೂನ್ 6 ರ ಒಳಗೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ತಾಲೂಕು ಪಂಚಾಯತ್ ಕಚೇರಿ, ಕಾರ್ಕಳ ಇಲ್ಲಿಗೆ ಲಿಖಿತವಾಗಿ […]
ಕಾರ್ಕಳ: ನೀರಿನ ಮಿತ ಬಳಕೆಗೆ ಸೂಚನೆ
ಉಡುಪಿ, ಮೇ 20: ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ ಮಂಡ್ಲಿ ನದಿಯು ಸಂಪೂರ್ಣವಾಗಿ ಬತ್ತಿ ಹೋಗಿರುವುದರಿಂದ ರಾಮ ಸಮುದ್ರದಿಂದ ನೀರು ಮೇಲಕ್ಕೆತ್ತಿ ಶುದ್ಧೀಕರಿಸಿ ಪೂರೈಸುತ್ತಿದ್ದು, ಪ್ರಸ್ತುತ ರಾಮಸಮುದ್ರದಲ್ಲಿ ಕೂಡಾ ಅಂದಾಜು ಸುಮಾರು 20 ದಶಲಕ್ಷ ಲೀಟರ್‍ನಷ್ಟು ನೀರು ಸಂಗ್ರಹವಿರುವುದರಿಂದ ಮೇ 25 ರ ವರೆಗೆ ಈಗ ಪೂರೈಸುತ್ತಿರುವಂತೆ 2 ದಿನಗಳಿಗೊಮ್ಮೆ ಪೂರೈಸಲಾಗುವುದು. ಮಳೆ ಬಾರದೇ ಇದ್ದಲ್ಲಿ ಅಂದಿನಿಂದ (ಮೇ 25 ರಿಂದ) 3 ದಿನಗಳಿಗೊಮ್ಮೆ ಪೂರೈಸಲಾಗುವುದು. ಆದ್ದರಿಂದ ತಗ್ಗು ಪ್ರದೇಶದಲ್ಲಿರುವ ನೀರಿನ ಬಳಕೆದಾರರು ನೀರಿನ ಬಳಕೆ ಮಿತಗೊಳಿಸಿ, […]
ಕಾರ್ಕಳ: ಹಿರಿಯಂಗಡಿ ಕುಂಟಲ್ಪಾಡಿ ಹಿಂದು ರುದ್ರಭೂಮಿ ಮುಕ್ತಿಧಾಮ ಲೋಕಾರ್ಪಣೆ

ಕಾರ್ಕಳ: ಹಿರಿಯಂಗಡಿ – ಕುಂಟಲ್ಪಾಡಿಯಲ್ಲಿ ಹಿಂದೂ ಜಾಗರಣ ವೇದಿಕೆ, ಅಂಬಾಭವಾನಿ ಫ್ರೆಂಡ್ಸ್, ಚೇತಕ್ ಯುವಕ –ಯುವತಿ ಮಂಡಲ ಇದರ ಆಶ್ರಯದಲ್ಲಿ ಹಿಂದು ರುದ್ರಭೂಮಿ ಮುಕ್ತಿಧಾಮದ ಲೋಕಾರ್ಪಣೆ ಕಾರ್ಯಕ್ರಮ ಮೇ. 5ರಂದು ನಡೆಯಿತು. ಕಾರ್ಯಕ್ರದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳದ ಹಿರಿಯ ನ್ಯಾಯವಾದಿ ಎಂ. ಕೆ. ವಿಜಯಕುಮಾರ್ ಅವರು ಲೋಕಾರ್ಪಣೆಗೊಳಿಸಿ, ಹಿಂದೂ ರುದ್ರಭೂಮಿಯು ಊರಿನ ಶೃದ್ಧಾವಂತ ಹಿಂದೂಗಳ ಸದ್ಬಾವನೆಯ ಪ್ರತಿಕವಾಗಿದೆ. ಸಾವಿನ ನಂತರವು ಬದುಕಿದೆ ಎಂಬ ಹಿಂದೂ ಧಾರ್ಮಿಕ ನಂಬಿಕೆಯ ತಳಹದಿಯಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜೋತಿಷಿ, ಶಿಕ್ಷಕರಾದ […]
ಬಂಟರ ಸಂಘ ಬೆಂಗಳೂರು ಬಿಸುಪರ್ಬ ಸಾಂಸ್ಕೃತಿಕ ಸ್ಪರ್ಧೆ, ಕಾರ್ಕಳ ಬಂಟರ ಸಂಘದ ಮುಡಿಗೆ ಪ್ರಥಮ ಪ್ರಶಸ್ತಿ

ಬೆಂಗಳೂರು: ಬಂಟರ ಸಂಘ ಬೆಂಗಳೂರು ಸಾಂಸ್ಕೃತಿಕ ಸಮಿತಿಯ ವತಿಯಿಂದ ಬಿಸುಪರ್ಬದ ಅಂಗವಾಗಿ ಆಯೋಜಿಸಲಾಗಿದ ಅಂತರ್ ಬಂಟ್ಸ್ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕಾರ್ಕಳ ಬಂಟರ ಸಂಘ ಪ್ರಥಮ ಸ್ಥಾನ ಪಡೆದಿದೆ. ದ್ವೀತಿಯ ಪ್ರಶಸ್ತಿಯನ್ನು ಸುರತ್ಕಲ್ ಬಂಟರ ಸಂಘ, ತೃತೀಯ ಪ್ರಶಸ್ತಿಯನ್ನು ಥಾಣೆ ಬಂಟರ ಸಂಘ ಪಡೆದಿದೆ. ಕಾರ್ಕಳ ಬಂಟರ ಸಂಘದ ಅದ್ಯಕ್ಷ ನಂದಳಿಕೆ ಸುಹಾಸ್ ಹೆಗ್ಡೆ ಅವರ ನೇತೃತ್ವದಲ್ಲಿ ಭಾಗವಹಿಸಿದ ತಂಡ ತುಳುನಾಡ ಸಿರಿ ಹಾಗು ಬಂಟ ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯಕ್ರಮವನ್ನು ನೀಡಿ ಕಲಾಭಿಮಾನಿಗಳ ಪ್ರಶಂಸೆಯೊಂದಿಗೆ ಪ್ರಥಮ ಪ್ರಶಸ್ತಿಯನ್ನು […]