ಬಂಟರ ಸಂಘ ಬೆಂಗಳೂರು ಬಿಸುಪರ್ಬ ಸಾಂಸ್ಕೃತಿಕ ಸ್ಪರ್ಧೆ, ಕಾರ್ಕಳ ಬಂಟರ ಸಂಘದ ಮುಡಿಗೆ ಪ್ರಥಮ‌ ಪ್ರಶಸ್ತಿ 

ಬೆಂಗಳೂರು: ಬಂಟರ ಸಂಘ ಬೆಂಗಳೂರು ಸಾಂಸ್ಕೃತಿಕ ಸಮಿತಿಯ ವತಿಯಿಂದ ಬಿಸುಪರ್ಬದ ಅಂಗವಾಗಿ ಆಯೋಜಿಸಲಾಗಿದ ಅಂತರ್ ಬಂಟ್ಸ್ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕಾರ್ಕಳ ಬಂಟರ ಸಂಘ ಪ್ರಥಮ ಸ್ಥಾನ ಪಡೆದಿದೆ. ದ್ವೀತಿಯ ಪ್ರಶಸ್ತಿಯನ್ನು ಸುರತ್ಕಲ್ ಬಂಟರ ಸಂಘ, ತೃತೀಯ ಪ್ರಶಸ್ತಿಯನ್ನು ಥಾಣೆ ಬಂಟರ ಸಂಘ ಪಡೆದಿದೆ.
 
ಕಾರ್ಕಳ ಬಂಟರ ಸಂಘದ ಅದ್ಯಕ್ಷ ನಂದಳಿಕೆ ಸುಹಾಸ್ ಹೆಗ್ಡೆ ಅವರ ನೇತೃತ್ವದಲ್ಲಿ  ಭಾಗವಹಿಸಿದ ತಂಡ ತುಳುನಾಡ ಸಿರಿ ಹಾಗು ಬಂಟ ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯಕ್ರಮವನ್ನು ನೀಡಿ ಕಲಾಭಿಮಾನಿಗಳ ಪ್ರಶಂಸೆಯೊಂದಿಗೆ ಪ್ರಥಮ ಪ್ರಶಸ್ತಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಸುಧೀಂದ್ರ ಶಾಂತಿ ಅವರ ಸಂಯೋಜನೆಯಲ್ಲಿ ಕಾರ್ಯಕ್ರಮ ಮೂಡಿ ಬಂದಿದೆ. ಕಾರ್ಕಳ ಬಂಟರ ಸಂಘ ಈಗಾಗಲೇ ಹಲವಾರು ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದೆ.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಸುಹಾಸ್ ಹೆಗ್ಡೆ, ವಿಜಯ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಅವಿನಾಶ್ ಶೆಟ್ಟಿ, ರಾಕೇಶ್ ಶೆಟ್ಟಿ, ಸುಹಾಸ್ ಶೆಟ್ಟಿ, ಸುಕೇಶ್ ಶೆಟ್ಟಿ, ಜ್ಯೋತಿ ಎಸ್ ಶೆಟ್ಟಿ, ವಂದನಾ ರೈ, ಸುನೀತಾ ಶೆಟ್ಟಿ, ಶಾಶ್ವತಿ ಶೆಟ್ಟಿ, ಸೀಮಾ ಶೆಟ್ಟಿ, ಜಯಲಕ್ಷ್ಮಿ ಎ. ಶೆಟ್ಟಿ, ಪೂರ್ಣಿಮ ಹೆಗ್ಡೆ, ಪೃಥ್ವಿ ಹೆಗ್ಡೆ, ಸಾರಿಕಾ ಶೆಟ್ಟಿ, ಜಯಲಕ್ಷ್ಮಿ ಶೆಟ್ಟಿ, ಸರ್ವಜ್ನ, ರೇವತಿ ಶೆಟ್ಟಿ, ವೈಷ್ಣವಿ ಶೆಟ್ಟಿ, ಪ್ರೀತಿ ಎಸ್. ಶೆಟ್ಟಿ, ಪ್ರಾಚಿ ಎಸ್. ಶೆಟ್ಟಿ, ಸುಪ್ರೀಯಾ ಶೆಟ್ಟಿ, ಕೃತಿ ಶೆಟ್ಟಿ, ಸ್ಮೃತಿ ಶೆಟ್ಟಿ, ಪ್ರೀಯಾ ಶೆಟ್ಟಿ, ಮಲ್ಲಿಕಾ ಶೆಟ್ಟಿ, ಪ್ರತೀಕ್ಷಾ ಶೆಟ್ಟಿ, ಅರ್ಚನಾ ಶೆಟ್ಟಿ, ಸುಷ್ಮಾ ಶೆಟ್ಟಿ, ಶ್ರೀಶಾ ಶೆಟ್ಟಿ, ಶ್ರುತಿ ಶೆಟ್ಟಿ, ಸರಿತಾ ಶೆಟ್ಟಿ, ವಿಜಯ್ ಕಡಂಬ, ವಿಜಯ್ ಶೆಟ್ಟಿ, ಅವಿನಾಶ್ ಶೆಟ್ಟಿ, ಕೆ.ಎ. ಶೆಟ್ಟಿ, ಜಯಶ್ರೀ ಶೆಟ್ಟಿ, ನವನೀತ್ ಶೆಟ್ಟಿ, ಮಹೇಶ್ ಶೆಟ್ಟಿ, ಸುಕೇಶ್ ಶೆಟ್ಟಿ, ರಂಜಿತ್ ಶೆಟ್ಟಿ, ಪ್ರತೀಕ್ ಶೆಟ್ಟಿ, ಹರ್ಷ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಹರೀಶ್ ಶೆಟ್ಟಿ, ಹರೀಶ್ ನಿಟ್ಟೆ, ಸುನೀಲ್ ಚೌಟ, ಸುಧೀರ್ ಶೆಟ್ಟಿ, ಪ್ರಣಯ್ ಶೆಟ್ಟಿ, ಸುರ್ದಶನ ಶೆಟ್ಟಿ, ವೀನಿತ್ ಶೆಟ್ಟಿ, ಮನ್ವಿತ್ ಶೆಟ್ಟಿ, ಸಂದೇಶ್ ಶೆಟ್ಟಿ, ಸುಶಾಂತ್ ಶೆಟ್ಟಿ, ಪ್ರಜ್ವಲ್ ಶೆಟ್ಟಿ, ಸಾಗರ್ ಶೆಟ್ಟಿ, ಧನು ಶೆಟ್ಟಿ, ಶರತ್ ಶೆಟ್ಟಿ, ಮಂಜೇಶ್ ಶೆಟ್ಟಿ, ಕೀಶೋರ್ ಶೆಟ್ಟಿ ಸೇರಿದಂತೆ 60ಕ್ಕೂ ಮಿಕ್ಕಿದ ಬಂಟ ಕಲಾವಿದರು ಭಾಗವಹಿಸಿದರು. ತಂಡದ ಪ್ರಸಾದನದಲ್ಲಿ ಆದರ್ಶ ಕಾರ್ಕಳ ಸಹಕರಿಸಿದರು.