ಕಾರ್ಕಳ: ನೀರಿನ ಸುಳಿಗೆ ಸಿಲುಕಿ ಯುವಕ ಮೃತ್ಯು

ಕಾರ್ಕಳ: ನಡೆದುಕೊಂಡು ಹೋಗುವಾಗ ವೇಳೆ ಅಕಸ್ಮಾತ್ ಆಗಿ ಹಳ್ಳಕ್ಕೆ ಜಾರಿ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ನಂದಳಿಕೆ ಆರ್ಯಾಡ್ ಮಾನಬೆಟ್ಟು ಎಂಬಲ್ಲಿ ನಡೆದಿದೆ. ಪ್ರವೀಣ್ ( 19 ) ಮೃತ ಯುವಕ. ಈತ ಮೂಲತಃ ಬಾಳೆಹೊನ್ನೂರು ನಿವಾಸಿ. ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆಂದು ಬಂದಿದ್ದು, ಮಂಗಳವಾರ ಮಧ್ಯಾಹ್ನ ಮನೆಯ ಸಮೀಪದ ತೋಡಿಗೆ ಮನೆಯವರೊಂದಿಗೆ ಬಟ್ಟೆ ತೊಳೆಯಲು ಹೋಗಿದ್ದನು. ಈ ವೇಳೆ ಆಕಸ್ಮಿಕವಾಗಿ ಆಳವಾದ ಹಳ್ಳದ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ […]