ಕಾರ್ಕಳ: ಕೊಟ್ಟಿಗೆಯಲ್ಲಿ ಕಟ್ಟಿದ್ದ ದನ ಕಳವು
ಕಾರ್ಕಳ: ಇಲ್ಲಿನ ಕುಂಟಲ್ಪಾಡಿ ನಿವಾಸಿ ಸುನೀಲ್ ಕೊಟ್ಯಾನ್ ಎಂಬವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ದನವನ್ನು ಕಳ್ಳರು ಕದ್ದೊಯ್ದಿರುವ ಘಟನೆ ನಡೆದಿದೆ. ಸುನೀಲ್ ಕೃಷಿಕರಾಗಿದ್ದು, ಕೃಷಿಯ ಜತೆಗೆ ಹೈನುಗಾರಿಕೆಯನ್ನು ನಡೆಸುತ್ತಿದ್ದರು. 6 ದನಗಳನ್ನು ಖರೀದಿಸಿ ಸಾಕಿಕೊಂಡಿದ್ದರು. ಎಂದಿನಂತೆ ಎ.12ರಂದು ರಾತ್ರಿ ದನಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದರು. ಆದರೆ, ಮರುದಿನ ಬೆಳಿಗ್ಗೆ ಹಾಲು ಕರೆಯಲು ಬಂದಾಗ ಐದು ದನಗಳು ಮಾತ್ರ ಇದ್ದು, ಒಂದು ದನ ಕಳವಾಗಿರುವುದು ಗೊತ್ತಾಗಿದೆ. ಘಟನೆ ನಡೆದ ನಾಲ್ಕೈದು ದಿನಗಳ ಬಳಿಕ ಅಂದರೆ ಎ.16ರಂದು ಮೂವರು ವ್ಯಕ್ತಿಗಳು […]