ಕಂಬಳ ಪ್ರಶಸ್ತಿಯ ಸರದಾರ ತೆಳ್ಳಾರು ಮೋಡೆ ಇನ್ನಿಲ್ಲ
ಕಾರ್ಕಳ: ಕಂಬಳ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ತೆಳ್ಳಾರು ಮೋಡೆ ಇನ್ನಿಲ್ಲ. ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರೂ, ಔಷಧಿಗೆ ಸ್ವಂದಿಸದೇ ಶನಿವಾರ ಮದ್ಯಾಹ್ನ ಸಾವನ್ನಪ್ಪಿದೆ. ಹಗ್ಗ ಹಿರಿಯ, ಕಿರಿಯ, ನೇಗಿಲು ಹಿರಿಯ, ಕಿರಿಯ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗಳಿಸಿರುವ ತೆಳ್ಳಾರು ಮೋಡೆ, ಅಡ್ಡ ಹಲಗೆಯಲ್ಲಿ ಪ್ರತಿ ಬಾರಿಯೂ ಸರಣಿ ಪ್ರಶಸ್ತಿ ತನ್ನದಾಗಿರಿಸುವ ಮೂಲಕ ಕಂಬಳ ಕ್ಷೇತ್ರದಲ್ಲಿ ಜನಪ್ರಿಯವಾಗಿತ್ತು. ಕಾರ್ಕಳ ತೆಳ್ಳಾರು ನೇರೋಳ್ಳ ಪಲ್ಕೆ ಬರ್ಕೆ ಮನೆಯ ಕೋಣ ಇದಾಗಿರುವ ಮೂಲಕ ದುರ್ಗ- ತೆಳ್ಳಾರು ಹೆಸರು ಕಂಬಳ […]