ಕಾರ್ಕಳ: ಹಿರಿಯ ರಂಗಭೂಮಿ ಕಲಾವಿದ ಕೆ.ಪಿ.ಶಾಂಭವ ನಿಧನ
ಕಾರ್ಕಳ: ಹಿರಿಯ ರಂಗಭೂಮಿ ಕಲಾವಿದ, ಗಾಯಕ, ನಾಟಕ ರಚನೆಕಾರ, ನಿರ್ದೇಶಕ ಕೆ.ಪಿ.ಶಾಂಭವ ಕಾರ್ಕಳ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ತನ್ನ ಬಾಲ್ಯದಿಂದಲೇ ರಂಗಭೂಮಿಯಲ್ಲಿ ತನ್ನನ್ನು ತೊಡಗಿಕೊಂಡ ಇವರು ಕರಾವಳಿ ಸಂಗೀತ ಒಕ್ಕೂಟದ ಸದಸ್ಯ ರಾಗಿದ್ದು, ದೇವೆರ್ ತುಳು ಚಿತ್ರದಲ್ಲಿ ಇವರ ಮನೋಜ್ಞ ನಟನೆ ಜನಮೆಚ್ಚುಗೆಗೆ ಪಾತ್ರವಾಗಿತ್ತು. ಪತ್ನಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.