ಕಾರ್ಕಳ: ಯುವತಿಗೆ ಅಮಲು ಪದಾರ್ಥ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿರುವ ಕೃತ್ಯ ಅತ್ಯಂತ ಖಂಡನೀಯ: ವಿ.ಸುನಿಲ್ ಕುಮಾರ್ ಆಕ್ರೋಶ

ಕಾರ್ಕಳ: ಶ್ರಮ ಜೀವಿ ಸಮಾಜ ಭೋವಿ ಸಮುದಾಯದ ಬಡ ಯುವತಿಯೋರ್ವಳಿಗೆ ಮತ್ತು ಭರಿಸುವಂತ ಅಮಲು ಪದಾರ್ಥ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿರುವ ಕೃತ್ಯ ಅತ್ಯಂತ ಖಂಡನೀಯ. ಇದೊಂದು ಪೈಶಾಚಿಕ ಕೃತ್ಯ ಎಂದು ಘಟನೆಯನ್ನು ಮಾಜಿ ಸಚಿವ, ಶಾಸಕ ವಿ ಸುನಿಲ್ ಕುಮಾರ್ ಕಟು ಶಬ್ದಗಳಿಂದ ಟೀಕಿಸಿದ್ದಾರೆ. ಯುವತಿಯನ್ನು ಪುಸಲಾಯಿಸಿ ಅಮಲು ಪದಾರ್ಥದೊಂದಿಗೆ ಕಾರಿನಲ್ಲಿ ಸುಮಾರು ದೂರ ಪಳ್ಳಿ ತನಕ ಕರೆದೊಯ್ದು ಅಮಲು ಪದಾರ್ಥ ನೀಡಿ ಈ ಕೃತ್ಯ ನಡೆಸಿದ್ದಾರೆ ಎಂದರೆ ಇದನ್ನು ಊಹಿಸಲು ಅಸಾದ್ಯ. ಇದೊಂದು ಪೂರ್ವಯೋಜಿತ […]