ಕಾರ್ಕಳ ಎಣ್ಣೆಹೊಳೆ ಏತ ನೀರಾವರಿ ಯೋಜನೆ ಸಂಪೂರ್ಣ ವಿಫಲ, ಪುರಸಭೆ ವ್ಯಾಪ್ತಿಯಲ್ಲಿ ನೀರಿಗಾಗಿ ಹಾಹಾಕಾರ…!!!
ಕಾರ್ಕಳ: ಪುರಸಭೆ ವ್ಯಾಪ್ತಿಯಲ್ಲಿ ನೀರಿಗಾಗಿ ಹಾಹಾಕಾರ ಮುಂದುವರೆದಿದ್ದು, ಕುಡಿಯುವ ನೀರಿಗೂ ತತ್ವಾರ ಎದುರಿಸುವ ದಿನಗಳು ಆರಂಭವಾಗಿದೆ ಕೋಟ್ಯಾಂತರ ರೂ.ಯೋಜನೆಗಳು ಹಳ್ಳ ಹಿಡಿದಿರುವುದರಿಂದ ಈ ಸಂಕಷ್ಟ ಎದುರಾಗಿದೆ ಎಂದು ಪುರಸಭೆ ಸದಸ್ಯ ಕಾಂಗ್ರೇಸ್ ವಕ್ತಾರ ಶುಭದ ರಾವ್ ತಿಳಿಸಿದ್ದಾರೆ. ಮುಂಡ್ಲಿ ಜಲಾಶಯ ಸಂಪೂರ್ಣ ಬತ್ತಿಹೋಗಿದೆ. ರಾಮಸಮುದ್ರದಿಂದ ನೀರನ್ನು ಬಳಸಲಾಗುತ್ತಿದ್ದರೂ ಸಮರ್ಪಕವಾಗಿ ವಿತರಿಸಲು ಸಾದ್ಯವಾಗುತ್ತಿಲ್ಲ ಹಾಗಾಗಿ ಮಿತವಾದ ನೀರಿನ ಬಳಕೆ ಮಾಡುವಂತೆ ಪುರಸಭೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಈ ನಡುವೆ 136 ಕೋಟಿ ರೂ.ನಲ್ಲಿ ಪೂರ್ಣಗೊಂಡ ಎಣ್ಣೆಹೊಳೆ ಏತ ನೀರಾವರಿ […]