ಕಾರ್ಕಳ: ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆಂದು ಪ್ರಾಂಶುಪಾಲರಿಗೆ ಹುಸಿ ಕರೆ; ದೂರು ದಾಖಲು

ಕಾರ್ಕಳ: ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆಂದು ಬೆಳ್ಮಣ್ ಸರಕಾರಿ ಪ.ಪೂ ಕಾಲೇಜಿನ ಪ್ರಾಂಶುಪಾಲರಿಗೆ ಹುಸಿ ಕರೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಳ್ಮಣ್ ಸರಕಾರಿ ಪ.ಪೂ ಕಾಲೇಜಿನ ಪ್ರಾಂಶುಪಾಲ ವಿಷ್ಣುಮೂರ್ತಿ ಮಯ್ಯ ಮಾ.30 ಬೆಳಿಗ್ಗೆ 11:52ಕ್ಕೆ ತಮ್ಮ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ಅಪರಿಚಿತ ಮಹಿಳೆಯಿಂದ ಕರೆ ಬಂದಿದ್ದು, ತಾನು ಪಿ.ಯು. ಮಂಡಳಿಯ ಪರೀಕ್ಷಾ ವಿಭಾಗದಿಂದ ಕರೆ ಮಾಡುತ್ತಿರುವುದಾಗಿ ಹೇಳಿದ್ದಾಳೆ. ಅಲ್ಲದೆ, ಮಾ. 31ರಂದು ನಡೆಯುವ ಬಯೋಲಜಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಉಳಿದ ಇಂಗ್ಲೀಷ್, ವಿಜ್ಞಾನ ವಿಭಾಗದ ಪ್ರಶ್ನೆ […]