ಕಾರ್ಕಳ: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

ಉಡುಪಿ: ಇಲ್ಲಿನ ನಿಟ್ಟೆ ಗ್ರಾಮದ ಅರಂತಬೆಟ್ಟು ದರ್ಕಾಸ್ ಬಳಿಯ ಮನೆಯೊಂದರ ಬಾವಿಗೆ ಆಹಾರ ಅರಸಿಕೊಂಡು ಬಂದಿದ್ದ ಚಿರತೆ ಮರಿ ಬಿದ್ದಿದ್ದು, ಸ್ಥಳೀಯರ ಸಹಕಾರದಿಂದ ಅರಣ್ಯ ಇಲಾಖೆಯವರು ಚಿರತೆಯನ್ನು ರಕ್ಷಣೆ ಮಾಡಿದ್ದಾರೆ. ರಾತ್ರಿ ಮನೆಯ ಬಳಿ ಕೋಳಿ ಇರುವುದನ್ನು ಗಮನಿಸಿದ್ದ ಚಿರತೆ ಅದನ್ನು ಹಿಡಿದು ತಿನ್ನಲು ಓಡುವ ಭರದಲ್ಲಿ ತೆರೆದ ಬಾವಿಗೆ ಬಿದ್ದಿದೆ. ಮುಂಜಾನೆ ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಬೋನು ಮತ್ತು ಬಲೆಯನ್ನು ಇರಿಸಿ ಚಿರತೆಯನ್ನು ಬಾವಿಯಿಂದ ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು. ಒಂದು ವರ್ಷದ ಮರಿ […]